ನಂಜನಗೂಡಿನಲ್ಲಿ ನೂತನವಾಗಿ ರಚಿಸಿರುವ ವೀರ ಮಡಿವಾಳರ ಸಂಘ ಅಸ್ತಿತ್ವಕ್ಕೆ
ಮೈಸೂರು : ಮಡಿವಾಳ ಸಮುದಾಯದ ಸಾಮಾಜಿಕ, ಶೈಕ್ಷಣಿಕ ಮತ್ತು ಆರ್ಥಿಕ ಅಭಿವೃದ್ಧಿಗಾಗಿ ವಿವಿಧ ಕಾರ್ಯಕ್ರಮಗಳನ್ನು ರೂಪಿಸಲು ಮತ್ತು ಸಮುದಾಯವನ್ನು ಸಂಘಟನೆ ಮಾಡುವ ಮೂಲಕ ಅವರಲ್ಲಿ ರಾಜಕೀಯ ಶಕ್ತಿ ತುಂಬಲು ನೂತನವಾಗಿ ನಂಜನಗೂಡು ತಾಲ್ಲೂಕು ವೀರ ಮಡಿವಾಳರ ಸಂಘವನ್ನು ಅಸ್ತಿತ್ವಕ್ಕೆ ತರಲಾಗಿದೆ ಎಂದು ಸಂಘದ ನೂತನ ಅಧ್ಯಕ್ಷರಾದ ಡಾ.ಡಿ.ಚಂದ್ರು ಹೇಳಿದರು.
ನಗರದ ಜಲದರ್ಶಿನಿ ಅತಿಥಿ ಗೃಹದಲ್ಲಿ ಶುಕ್ರವಾರ ನಡೆದ ಸಮಿತಿಯ ಸಭೆಯ ಬಳಿಕ ಸುದ್ದಿಗಾರರೊಂದಿಗೆ ಅವರು ಮಾತನಾಡಿ, ನಂಜನಗೂಡು ತಾಲ್ಲೂಕಿನಲ್ಲಿ ಮಡಿವಾಳ ಸಮುದಾಯದ ಸುಮಾರು 10 ಸಾವಿರಕ್ಕೂ ಹೆಚ್ಚು ಜನರು ಇದ್ದಾರೆ. ಆದರೇ, ಆರ್ಥಿಕವಾಗಿ, ಶೈಕ್ಷನೀಕವಾಗಿ ಮತ್ತು ರಾಜಕೀಯವಾಗಿ ನಾವು ತುಂಬಾ ಹಿಂದುಳಿದಿದ್ದೇವೆ. ಸಂಘಟನೆ ಮತ್ತು ಒಗ್ಗಟ್ಟಿನ ಕೊರತೆಯಿಂದ ನಾವು ರಾಜಕೀಯವಾಗಿ ಗುರುತಿಸಿಕೊಳ್ಳಲು ಸಾಧ್ಯವಾಗುತ್ತಿಲ್ಲ. ಜನಪ್ರತಿನಿಧಿಗಳು ಮತ್ತು ರಾಜಕೀಯ ಪಕ್ಷಗಳ ಗಮನ ಸೆಳೆಯಲು ನಾವು ಸಂಘಟಿತರಾಗಿ ನಮ್ಮ ಹಕ್ಕುಗಳನ್ನು ಪಡೆಯಲು ಮತ್ತು ನಮ್ಮ ಸಮುದಾಯದ ಮಕ್ಕಳನ್ನು ಶೈಕ್ಷಣಿಕವಾಗಿ ಅಭಿವೃದ್ಧಿ ಮಾಡಲು ನಾವು ನೂತನ ಸಂಘವನ್ನು ಸ್ಥಾಪಿಸಿದ್ದೇವೆ. ಇದರ ಮೂಲಕ ತಾಲ್ಲೂಕಿನ ಎಲ್ಲ ಹಳ್ಳಿಗಳಲ್ಲೂ ಪ್ರಚಾರ ನಡೆಸಿ ಸಂಘಟಿತರಾಗಿ ಸಮುದಾಯದ ಅಭಿವೃದ್ಧಿಗೆ ಅಗತ್ಯವಾದ ಅನುದಾನ ಸೇರಿದಂತೆ ಇನ್ನಿತರ ಅವಕಾಶಗಳನ್ನು ಪಡೆಲು ಹೋರಾಟ ನಡೆಸುತ್ತೇವೆ ಎಂದರು.
ನಂಜನಗೂಡು ತಾಲ್ಲೂಕಿನಲ್ಲಿ ಗ್ರಾಪಂ, ತಾಲ್ಲೂಕು ಪಂಚಾಯ್ತಿ, ಜಿಪಂ ಸೇರಿದಂತೆ ನಗರ ಸಭೆಗಳಿಗೆ ನಮ್ಮ ಸಮುದಾಯದ ಪ್ರತಿನಿಧಿಗಳು ಚುನಾಯಿತರಾಗಬೇಕು ಎನ್ನುವುದು ನಮ್ಮ ಸಂಘಟನೆಯ ಮಹತ್ವಾಕಾಂಕ್ಷೆಯ ಉದ್ಧೇಶವಾಗಿದೆ. ವಿವಿಧ ಪಕ್ಷಗಳಲ್ಲಿ ನಮ್ಮ ಸಮುದಾಯದ ಮುಖಂಡರು ಗುರುತಿಸಿಕೊಂಡಿದ್ದರೂ ಅವರು ಅವಕಾಶಗಳಿಂದ ವಂಚಿತರಾಗಿದ್ದಾರೆ ಅವರೆಲ್ಲರಿಗೂ ಸೂಕ್ತ ಅವಕಾಶಗಳು ದೊರೆಯಬೇಕು. ನಂಜನಗೂಡು ಪಟ್ಟಣದಲ್ಲಿ ಮಡಿವಾಳ ಸಮುದಾಯ ಭವನಕ್ಕೆ ಈ ಹಿಂದೆಯೇ ಭೂಮಿಪೂಜೆ ನಡೆದಿದ್ದರೂ ಭವನದ ಕಾಮಗಾರಿ ನಡೆದಿಲ್ಲ. ಅದನ್ನು ಶೀಘ್ರದಲ್ಲೇ ಪೂರೈಸಬೇಕು. ನಮ್ಮ ಸಮುದಾಯದ ಮಕ್ಕಳು ಉನ್ನತ ಶಿಕ್ಷಣ ಪಡೆಯಲು ನಮ್ಮ ಸಂಘಟನೆ ಅಗತ್ಯವಾದ ನೆರವು, ಸಲಹೆ ಸಹಕಾರ ನೀಡಲಿದೆ. ಗ್ರಾಮಾಂತರ ಪ್ರದೇಶಗಳಲ್ಲಿ ನಮ್ಮ ಸಮುದಾಯದವರ ಯಾವುದೇ ಸಣ್ಣ ಪುಟ್ಟ ಸಮಸ್ಯೆಗಳನ್ನು ನಮ್ಮ ಸಂಘಟನೆ ಸೌಹಾರ್ಧಯುತವಾಗಿ ಬಗೆಹರಿಸಿ ಶಾಂತಿ ಸೌಹಾರ್ಧತೆ ಕಾಪಾಡುವ ಉದ್ದೇಶವನ್ನೂ ಹೊಂದಿದೆ. ನಮ್ಮ ಸಮುದಾಯಕ್ಕೆ ಅಗತ್ಯವಾಗಿ ಆಗಬೇಕಿರುವ ಕೆಲಸಗಳನ್ನು ಪಟ್ಟಿ ಮಾಡಿ ಶೀಘ್ರದಲ್ಲೇ ಮುಖ್ಯಮಂತ್ರಿಗಳಾದ ಸಿದ್ದರಾಮಯ್ಯ ಮತ್ತು ಉಪಮುಖ್ಯಮಂತ್ರಿಗಳಅದ ಡಿ.ಕೆ.ಶಿವಕುಮಾರ್ ಅವರ ಗಮನಕ್ಕೆ ತರಲಾಗುವುದು. ಇದಕ್ಕಾಗಿ ಆಯಾ ಪಕ್ಷಗಳಲ್ಲಿ ಕೆಲಸ ಮಾಡುವ ನಮ್ಮ ಸಮುದಾಯದ ಮುಖಂಡರ ನೇತೃತ್ವದಲ್ಲಿ ಈ ಕಾರ್ಯ ಕೈಗೊಳ್ಳುತ್ತೇವೆ. ಒಟ್ಟಾರೆ ಸಮುದಾಯದ ಎಲ್ಲ ಮುಖಂಡರ ಜತೆಗೂಡಿ ನಮ್ಮ ಸಂಘಟನೆಯನ್ನು ಅಭಿವೃದ್ಧಿ ಪಡಿಸಿ ಸಮುದಾಯದ ಒಳಿತಿಗಾಗಿ ಶ್ರಮವಹಿಸುತ್ತೇವೆ ಎಂದರು.
ಸುದ್ದಿಗೋಷ್ಠಿಯಲ್ಲಿ ಸಂಘಟನೆಯ ಗೌರವ ಅಧ್ಯಕ್ಷರಾದ ಮಹದೇವ ಶೆಟ್ಟಿ, ಉಪಾಧ್ಯಕ್ಷರಾದ ಮಹದೇವ, ಸ್ವಾಮಿ, ಪ್ರಧಾನ ಕಾರ್ಯದರ್ಶಿ ಶ್ರೀರಾಮ, ಸದಸ್ಯರಾದ ಶ್ರೀನಿವಾಸ, ಮಹೇಶ, ಎಚ್.ವಿ.ಸುರೇಶ್ ಮತ್ತಿತರರು ಇದ್ದರು.
(ಮೈಸೂರು ಮೇಲ್.ಕಾಂ ವೆಬ್ಸೈಟನಲ್ಲಿ ಸುದ್ದಿ ಮತ್ತು ಜಾಹಿರಾತು ನೀಡಲು ಸಂಪರ್ಕಿಸಿ ನಜೀರ್ ಅಹಮದ್-9740738219)
0 ಕಾಮೆಂಟ್‌ಗಳು