ಸಮಾಜ ಸೇವಕ ವಿನಯ್ ರಾಮಕೃಷ್ಣ ಅವರಿಂದ ಸರ್ಕಾರಿ ಶಾಲೆಗೆ ಉಚಿತ ಕಂಪ್ಯೂಟರ್ ವಿತರಣೆ
ಜನವರಿ 04, 2023
ಟಿ.ಬಿ.ಸಂತೋಷ, ಮದ್ದೂರು
ಮದ್ದೂರು : ತಾಲೂಕಿನ ಕೆ.ಎಂ.ದೊಡ್ಡಿ ಸಮೀಪದ ಕಾರ್ಕಹಳ್ಳಿ ಗ್ರಾಮದ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆಗೆ ಆರ್.ಕೆ.ವಿದ್ಯಾ ಸಂಸ್ಥೆಯ ನಿರ್ದೇಶಕ ಹಾಗೂ ಸಮಾಜ ಸೇವಕ ವಿನಯ್ ರಾಮಕೃಷ್ಣ ಅವರು ಉಚಿತವಾಗಿ ಕಂಪ್ಯೂಟರ್ ಗಳನ್ನು ವಿತರಿಸಿದರು. ಈ ಸಂದರ್ಭದಲ್ಲಿ ಅವರು ಮಾತನಾಡಿ, ಸರ್ಕಾರಿ ಶಾಲಾ ವಿದ್ಯಾರ್ಥಿಗಳಲ್ಲಿ ಕಲಿಕಾ ಆಸಕ್ತಿ ಹೆಚ್ಚಿಸಲು ಮತ್ತು ತಾಂತ್ರಿಕ ಶಿಕ್ಷಣದ ಬಗ್ಗೆ ತಿಳಿದುಕೊಳ್ಳಲು ಕಂಪ್ಯೂಟರ್ ಶಿಕ್ಷಣದ ಅವಶ್ಯಕತೆ ಇರುವ ಕಾರಣ ಉಚಿತವಾಗಿ ಕಂಪ್ಯೂಟರ್ ನೀಡುತ್ತಿರುವುದಾಗಿ ತಿಳಿಸಿದರು. ಎಸ್‍ಡಿಎಂಸಿ ಅದ್ಯಕ್ಷ ಪ್ರದೀಪ್, ಗ್ರಾಪಂ ಸದಸ್ಯ ಮಹೇಶ್, ಯುವ ಮುಖಂಡ ಅಣ್ಣೂರು ರಂಜು, ಅಭಿμÉೀಕ, ಎಸ್‍ಡಿಎಂಸಿ ಮಾಜಿ ಅಧ್ಯಕ್ಷ ನಂದೀಶ್, ಪ್ರತಾಪ್, ಪ್ರಜ್ವಲ್, ಕಾಳೇಗೌಡ, ಶಂಕರ, ರೇಖಾ, ದಿವ್ಯ, ಪ್ರಮೋದ್, ಮುಖ್ಯ ಶಿಕ್ಷಕ ಸಿದ್ದೇಗೌಡ, ಸಹ ಶಿಕ್ಷಕಿಯರಾದ ಭಾನುಮತಿ, ಗೀತಾಮಣಿ, ಸೋನಿಕಾ ಮುಂತಾದವರು ಉಪಸ್ಥಿತರಿದ್ದರು.
0 ಕಾಮೆಂಟ್‌ಗಳು