ತಿ.ನರಸೀಪುರ ಕಬ್ಬಿನ ಗದ್ದೆಯಲ್ಲಿ 2 ಚಿರತೆ ಮರಿಗಳು ಪ್ರತ್ಯಕ್ಷ : ಮತ್ತೇ ಆತಂಕಕ್ಕೀಡಾದ ಜನತೆ
ಜನವರಿ 21, 2023
ತಿ.ನರಸೀಪುರ : ನಿನ್ನೆಯಷ್ಟೇ ತಾಲ್ಲೂಕಿನ ಕನ್ನನಾಯಕನಹಳ್ಳಿ ಗ್ರಾಮದ ಸಿದ್ದಮ್ಮ ಎಂಬ 60 ವರ್ಷದ ಮಹಿಳೆ ಚಿರತೆ ದಾಳಿಗೆ ಬಲಿಯಾಗಿರುವ ಬೆನ್ನಲ್ಲೇ ಸಮೀಪದ ಚಿದರಹಳ್ಳಿ ಗ್ರಾಮದ ಮಾದೇಗೌಡರ ಕಬ್ಬಿನ ಗದ್ದೆಯಲ್ಲಿ ಎರಡು ಚಿರತೆ ಮರಿಗಳು ಪ್ರತ್ಯಕ್ಷವಾಗಿದ್ದು ಜನ ಮತ್ತೇ ಆತಂಕಕ್ಕೆ ಒಳಗಾಗಿದ್ದಾರೆ.
ಚಿರತೆ ದಾಳಿಯಿಂದ ತಿ.ನರಸೀಪುರ ತಾಲ್ಲೂಕಿನ ಜನ ಕಂಗೆಟ್ಟಿದ್ದು, ಎಂ.ಎಲ್.ಹುಂಡಿ ಬೆಟ್ಟದ ಬಳಿ ಚಿರತೆ ಸೆರೆಯಾದ ನಂತರ ಒಂದಷ್ಟು ನೆಮ್ಮದಿಯ ನಿಟ್ಟುಸಿರು ಬಿಟ್ಟು ರೈತಾಪಿ ವರ್ಗ ಬೇಸಾಯದಲ್ಲಿ ತೊಡಗಿಕೊಂಡಿದ್ದರು. ಆದರೆ, ಕನ್ನನಾಯಕನ ಹಳ್ಳಿಯಲ್ಲಿ ನರಭಕ್ಷಕ ಚಿರತೆ ವೃದ್ಧೆಯ ಮೇಲೆ ದಾಳಿ ಮಾಡಿ ಬಲಿ ತೆಗೆದುಕೊಂಡ ಮೇಲೆ ಈ ಭಾಗದ ಜನರು ಮತ್ತಷ್ಟು ಆತಂಕಕ್ಕೆ ಈಡಾಗಿದ್ದರು. ಈಗ ಚಿರತೆ ಮರಿಗಳು ಸಿಕ್ಕಿರುವ ಘಟನೆಯಿಂದ ಈ ಭಾಗದಲ್ಲಿ ಚಿರತೆ ಇರುವುದು ಖಾತರಿಯಾಗಿ ಜನ ಮತ್ತಷ್ಟು ಭಯ ಭೀತರಾಗಿದ್ದಾರೆ. ಯಾವುದೇ ಕಾರಣಕ್ಕೂ ಅರಣ್ಯ ಇಲಾಖೆಯವರು ಮೈ ಮರೆಯದೆ ಈ ಭಾಗದಲ್ಲಿ ಸಂಪೂರ್ಣವಾಗಿ ಚಿರತೆಗಳನ್ನು ಸೆರೆ ಹಿಡಿದು ಜನ ಸಾಮಾನ್ಯರನ್ನು ರಕ್ಷಿಸಬೇಕು ಎಂದು ಒತ್ತಾಯಿಸಿದ್ದಾರೆ.
0 ಕಾಮೆಂಟ್‌ಗಳು