ನರಸೀಪುರದಲ್ಲಿ ನಿಲ್ಲದ ನರಭಕ್ಷಕನ ಅಟ್ಟಹಾಸ 11 ವರ್ಷದ ಬಾಲಕನನ್ನು ಹೊತ್ತೊಯ್ದು ಕೊಂದು ಹಾಕಿದ ಚಿರತೆ

ನಾಗೇಂದ್ರ ಕುಮಾರ್, ಟಿ.ನರಸೀಪುರ
ತಿ.ನರಸೀಪುರ : ತಾಲ್ಲೂಕಿನಲ್ಲಿ ನರಭಕ್ಷಕ ಚಿರತೆಯ ಅಟ್ಟಹಾಸ ಮುಂದುವರಿದಿದ್ದು, ಶನಿವಾರ ರಾತ್ರಿ 11 ವರ್ಷದ ಬಾಲಕೊಬ್ನ ಮೇಲೆ ಚಿರತೆ ದಾಳಿ ನಡೆಸಿ, ಬಾಲಕನನ್ನು ಒಂದು ಕಿಮೀ ಎಳೆದೊಯ್ದು ಕೊಂದು ಹಾಕಿದೆ.
ತಾಲ್ಲೂಕಿನ ಹೊರಳಹಳ್ಳಿ ಗ್ರಾಮದಲ್ಲಿ ತಡರಾತ್ರಿ ಘಟನೆ 
ನಡೆದಿದ್ದು, 11 ವರ್ಷದ ಜಯಂತ್ ಮೃತ ಬಾಲಕ ಎಂದು ಗುರುತಿಸಲಾಗಿದೆ. 

ಜಯಂತ್‍ನನ್ನು ಚಿರತೆ ಎಳೆದೊಯ್ದ ವಿಷಯ ತಿಳಿಯುತ್ತಿದ್ದಂತೆ ಗ್ರಾಮಸ್ಥರು ಹುಡುಕಾಟ ನಡೆಸಿದರು. ಘಟನಾ ಸ್ಥಳದಿಂದ 1 ಕಿಮೀ ದೂರದಲ್ಲಿ ಬಾಲಕನ ಮೃತ ದೇಹ ಪತ್ತೆಯಾಗಿದ್ದು, ಬಾಲಕನ ದೇಹವನ್ನು ಚಿರತೆ ತಿಂದು ಹಾಕಿದೆ.

ಸ್ಥಳಕ್ಕೆ ಜಿಲ್ಲಾಧಿಕಾರಿಗಳು, ಅರಣ್ಯಧಿಕಾರಿಗಳು, ಶಾಸಕ ಅಶ್ವಿನ್ ಕುಮಾರ್, ಪೊಲೀಸರು ಭೇಟಿ ನೀಡಿದ್ದಾರೆ. 
ಹೊರಳಹಳ್ಳಿ ಗ್ರಾಮದಲ್ಲಿ ಈಗ ಬಿಗುವಿನ ವಾತಾವರಣ ಸೃಷ್ಟಿಯಾಗಿದೆ.




ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು