ನಜರ್ ಬಾದ್ ಪೊಲೀಸರಿಂದ ಕುಖ್ಯಾತ ಕಳ್ಳನ ಬಂಧನ : 7 ಲಕ್ಷ ಮೌಲ್ಯದ ಚಿನ್ನಾಭರಣ ವಶ
ನವೆಂಬರ್ 21, 2022
ಮೈಸೂರು : ಕುಖ್ಯಾತ ಕಳ್ಳನೊಬ್ಬನನ್ನು ಬಂಧಿಸಿರುವ ನಜರ್ ಬಾದ್ ಠಾಣೆಯ ಪೊಲೀಸರು 7 ಲಕ್ಷ ರೂ ಮೌಲ್ಯದ ಸುಮಾರು 163 ಗ್ರಾಂ ತೂಕದ ಚಿನ್ನಾಭರಣಗಳನ್ನು ವಶಕ್ಕೆ ಪಡೆದಿದ್ದಾರೆ. ನಾಡಹಬ್ಬ ಮೈಸೂರು ದಸರಾ ಸಂದರ್ಭದಲ್ಲಿ ಪಲಪುಷ್ಪ ಪ್ರದರ್ಶನ ವೀಕ್ಷಣೆಗೆ ಚಾಮರಾಜನಗರದಿಂದ ಮೈಸೂರಿಗೆ ಬಂದಿದ್ದ ವ್ಯಕ್ತಿಯೊಬ್ಬರು ತಮ್ಮ ಕಾರನ್ನು ಆದಾಯ ತೆರಿಗೆ ಕಛೇರಿ ಮುಂಭಾಗ ನಿಲ್ಲಿಸಿದ್ದರು. ಈ ಸಂದರ್ಭದಲ್ಲಿ ಕಳ್ಳ ಕಾರಿನ ಒಳಗಡೆ ಇದ್ದ ವ್ಯಾನಿಟಿ ಬ್ಯಾಗ್‍ನಲ್ಲಿದ್ದ ಚಿನ್ನದ ಆಭರಣಗಳು ಕಳವು ಮಾಡಿದ್ದನು. ಈ ಬಗ್ಗೆ ನಜರ್ ಬಾದ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ನವೆಂಬರ್ 19 ರಂದು ಪೊಲೀಸರು ಆರೋಪಿಯನ್ನು ದಸ್ತಗಿರಿ ಮಾಡಿ ಆತನಿಂದ ಚಿನ್ನಾಭರಣ ವಶಕ್ಕೆ ಪಡೆದರು. ಡಿಸಿಪಿ ಎಂ.ಎಸ್. ಗೀತ ಮಾರ್ಗದರ್ಶನದಲ್ಲಿ ಎಸಿಪಿ ಎಂ.ಎನ್. ಶಶಿಧರ್ ನೇತೃತ್ವದಲ್ಲಿ, ನಜರ್ ಬಾದ್ ಇನ್ಸ್‍ಪೆಕ್ಟರ್ ಕೆ.ಜೀವನ್, ಪಿಎಸ್‍ಐ ಗಳಾದ ವೈಶಾಲಿ ಬಿರಾದರ್, ಕೆ.ರಘು ಹಾಗೂ ಸಿಬ್ಬಂದಿಗಳಾದ ಎಸ್.ಸತೀಶ್‍ಕುಮಾರ್, ಕಿರಣ್ ರಾಥೋಡ್, ಸಂತೋಷ್‍ಕುಮಾರ್.ಬಿ.ಡಿ, ಮಲ್ಲಿಕಾರ್ಜುನ, ಸವಿತಾ ಮಾನಪ್ಪವರ್, ಮತ್ತು ಸಿ.ಡಿ.ಆರ್ ಘಟಕದ ಕುಮಾರ್.ಪಿ ಕಾರ್ಯಾಚರಣೆಯಲ್ಲಿ ಪಾಲ್ಗೊಂಡಿದ್ದರು. ಪತ್ತೆ ಕಾರ್ಯವನ್ನು ಪೊಲೀಸ್ ಆಯುಕ್ತರಾದ ಬಿ. ರಮೇಶ್ ಪ್ರಶಂಸಿಸಿದ್ದಾರೆ.
0 ಕಾಮೆಂಟ್‌ಗಳು