ಆರೋಪಿಗೆ ಗಲ್ಲು ಶಿಕ್ಷೆ ನೀಡಲು ಒತ್ತಾಯ
ಎಂ.ಎಸ್.ಮಂಜುನಾಥ್
ಉಪಾಧ್ಯಕ್ಷರು
ವೀರಶೈವ ಲಿಂಗಾಯತ ಮಹಾಸಭಾ
ಮಂಡ್ಯ : ದೇಶದಲ್ಲಿ ಕೊಲೆ ಮತ್ತು ಅತ್ಯಾಚಾರಿಗಳಿಗೆ ಕಠಿಣ ಶಿಕ್ಷೆ ನೀಡದಿರುವುದೇ ಅತ್ಯಾಚಾರಗಳು ಹೆಚ್ಚಳಕ್ಕೆ ಕಾರಣವಾಗಿದೆ ಎಂದು ವೀರಶೈವ ಲಿಂಗಾಯತ ಮಹಾಸಭಾ ಜಿಲ್ಲಾ ಉಪಾಧ್ಯಕ್ಷ ಹಾಗೂ ಕನ್ನಡ ಸೇನೆ ಜಿಲ್ಲಾ ಉಪಾಧ್ಯಕ್ಷ ಎಂ.ಎಸ್.ಮಂಜುನಾಥ್ ಆತಂಕ ವ್ಯಕ್ತಪಡಿಸಿದ್ದಾರೆ.
ಮಂಡ್ಯದಲ್ಲಿಂದು ಪತ್ರಿಕಾ ಹೇಳಿಕೆ ನೀಡಿರುವ ಅವರು, ಮಳವಳ್ಳಿ ನಗರದಲ್ಲಿ ಮನೆಪಾಠಕ್ಕೆ ಹೋಗಿದ್ದ ಬಾಲಕಿಯ ಮೇಲೆ ಅತ್ಯಾಚಾರವೆಸಗಿ ಕೊಲೆ ಮಾಡಿದ ಘಟನೆ ಖಂಡನಾರ್ಹ ಮತ್ತು ನಾಗರಿಕ ಸಮಾಜ ತಲೆತಗ್ಗಿಸುವಂತಹದು. ಹೆಣ್ಣು ಮಕ್ಕಳನ್ನು ಹೆತ್ತವರು ಇಂದು ಆತಂಕದಲ್ಲಿದ್ದಾರೆ. ಶಿಕ್ಷಕರನ್ನೂ ನಂಬದ ಪರಿಸ್ಥಿತಿ ಎದುರಾಗಿದೆ.
ಇಂತಹ ಘಟನೆಗಳನ್ನು ಸರ್ಕಾರಗಳು ಗಂಭೀರವಾಗಿ ಪರಿಗಣಿಸಿ ತ್ವರಿತ ನ್ಯಾಯಾಲಯಗಳ ಮೂಲಕ ತುರ್ತು ವಿಚಾರಣೆ ನಡೆಸಿ ಘಟನೆಯು ಜನ ಮಾನಸದಿಂದ ಮರೆಯುವ ಮುನ್ನ ಆರೋಪಿಗೆ ಶಿಕ್ಷೆ ವಿಧಿಸಬೇಕು> ಈ ಶಿಕ್ಷೆಯ ಪ್ರಮಾಣ ಕೇಳಿದಾಕ್ಷಣ ಅತ್ಯಾಚಾರಿ ಎದೆಯೊಡೆದು ಸಾಯಬೇಕು ಅಂತಹ ಶಿಕ್ಷೆಯನ್ನು ನ್ಯಾಯಾಲಯ ನೀಡಬೇಕೆಂದು ಒತ್ತಾಯಿಸಿದರು.
ರಾಜ್ಯದಲ್ಲಿ ಮತ್ತು ದೇಶದಲ್ಲಿ ಇಂತಹ ಘಟನೆಗಳು ಪದೇ ಪದೇ ಮರುಕಳಿಸುತ್ತಿವೆ. ಕೊಲೆಗಡುಕರು, ಅತ್ಯಾಚಾರಿಗಳು, ಸರ್ಕಾರ ಮತ್ತು ಕಾನೂನಿಗೆ ಗೌರವ ಕೊಡುತ್ತಿಲ್ಲ. ನ್ಯಾಯದಾನ ಎಲ್ಲರಿಗೂ ಒಂದೇ ಆಗಬೇಕು. ಜಾತಿ, ಧರ್ಮ, ಸ್ಥಾನಮಾನಗಳನ್ನು ನೋಡಿ ನ್ಯಾಯದಾನ ಮಾಡಬಾರದು. ಇಂತಹ ಘಟನೆಗಳು ನಡೆದಾಗ ಆರೋಪಿಗಳಿಗೆ ಮರಣದಂಡನೆ ನೀಡಿದಾಗ ಮಾತ್ರವೇ ಇಂತಹ ಘಟನೆಗಳಿಗೆ ಕಡಿವಾಣ ಹಾಕಬಹುದು. ಪೋಷಕರು ತಮ್ಮ ಹೆಣ್ಣುಮಕ್ಕಳ ಬಗ್ಗೆ ಅತ್ಯಂತ ಜಾಗರೂಕರಾಗಿರಬೇಕು. ಯಾರನ್ನೂ ನಂಬದಂತಹ ಪರಿಸ್ಥಿತಿ ಉಂಟಾಗಿದೆ. ಸರ್ಕಾರಗಳಿ ಈ ನಿಟ್ಟಿನಲ್ಲಿ ಗಂಭೀರವಾಗಿ ಚಿಂತನೆ ನಡೆಸಬೇಕಿದೆ ಎಂದರು.
0 ಕಾಮೆಂಟ್‌ಗಳು