ಭಾರಿ ಮಳೆಗೆ ಕೊಚ್ಚಿಹೋದ ತಾತ್ಕಾಲಿಕ ಸೇತುವೆಗಳು : ಸಂಚಾರ ಅಸ್ತವ್ಯಸ್ಥ

ಅಪಘಾತಕ್ಕೂ ಮುನ್ನ ರಸ್ತೆ ರಿಪೇರಿಗೆ ಒತ್ತಾಯ

ವರದಿ-ಶಾರುಕ್ ಖಾನ್, ಹನೂರು 

ಹನೂರು : ಭಾರಿ ಮಳೆಗೆ ಪಟ್ಟಣದ ಲೊಕ್ಕನಹಳ್ಳಿ ಗ್ರಾಮಕ್ಕೆ ಸಂಪರ್ಕ ಕಲ್ಪಿಸುವ ಮಾರ್ಗದಲ್ಲಿ ತಟ್ಟೆಹಳ್ಳದ ಸೇತುವೆ ಹಾಗೂ ಬಂಡಳ್ಳಿ ಗ್ರಾಮಕ್ಕೆ ಸಂಪರ್ಕ ಕಲ್ಪಿಸುವ ಮಾರ್ಗ ಮದ್ಯೆಯ ಸ್ವಾಮಿ ಹಳ್ಳದ ಸೇತುವೆ ಕಾಮಗಾರಿ ನೆಡೆಯುತ್ತಿರುವ ಕಾರಣ ಅವುಗಳ ಪಕ್ಕದಲ್ಲಿ ನಿರ್ಮಿಸಿದ್ದ ತಾತ್ಕಾಲಿಕ ಸೇತುವೆಗಳು ಮಳೆಯಲ್ಲಿ ಕೊಚ್ಚಿ ಹೋಗಿವೆ. 
ಒಂದು ವಾರದಿಂದ ಸತತವಾಗಿ ಸುರಿಯುತ್ತಿರುವ ಮಳೆಗೆ ತಾತ್ಕಾಲಿಕ ಸೇತುವೆಗಳ ಮಣ್ಣು ಕೊಚ್ಚಿಹೋಗಿ ಇಲ್ಲಿಯೂ ಸಂಚಾರಕ್ಕೆ ಅಡಚಣೆ ಉಂಟಾಗಿದೆ. ವಾಹನ ಸಂಚಾರ ದುಸ್ತರವಾಗಿದ್ದು, ಅಪಘಾತಕ್ಕೆ ಆಹ್ವಾನ ನೀಡಿದಂತಾಗಿದೆ.


ಮಳೆಯ ಕಾರಣ ಸೇತುವೆ ಕಾಮಗಾರಿ ಸ್ಥಗಿತವಾಗಿದೆ. ತಾತ್ಕಾಲಿಕ ಸೇತುವೆಯೂ ಕುಸಿತವಾಗಿದ್ದರೂ ಸಂಬಂಧಪಟ್ಟ ಅಧಿಕಾರಿಗಳು ಯಾವುದೇ ಕ್ರಮ ಕೈಗೊಂಡಿಲ್ಲ. ವಾಹನ ಸಂಚಾರಕ್ಕೆ ತೀವ್ರ ತೊಂದರೆಯಾಗಿದ್ದು, ಯಾವುದೇ ಅಪಘಾತ ಸಂಭವಿಸುವ ಮುನ್ನ ಅಧಿಕಾರಿಗಳು ತಾತ್ಕಾಲಿಕ ಸೇತುವೆಗಳನ್ನು ಶೀಘ್ರದಲ್ಲಿ ದುರಸ್ತಿ ಮಾಡಬೇಕೆಂದು ಗ್ರಾಮಸ್ಥರು ಒತ್ತಾಯಿಸಿದ್ದಾರೆ.
 

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು