ಕೆ.ಆರ್.ಆಸ್ಪತ್ರೆಯಲ್ಲಿ ಕಳುವಾಗಿದ್ದ ನಾಲ್ಕು ಲಕ್ಷ ರೂ. ಮೌಲ್ಯದ ಪ್ರೆಷರ್ ಇಂಜೆಕ್ಟರ್ ಮಾನಿಟರ್ ಟ್ಯಾಬ್ ವಶ : ಒಬ್ಬನ ಬಂಧನ

 ದೇವರಾಜ ಠಾಣೆ ಪೊಲೀಸರ ಸಾಧನೆ

ಮೈಸೂರು : ನಗರದ ಕೆ.ಆರ್.ಆಸ್ವತ್ರೆಯ ಸ್ಕಾನಿಂಗ್ ರೂಂನಲ್ಲಿ ಕಳುವಾಗಿದ್ದ ೪ ಲಕ್ಷ ಮೌಲ್ಯದ ಪ್ರೆಷರ್ ಇಂಜೆಕ್ಟರ್ ಮಾನಿಟರ್ ಟ್ಯಾಬ್‌ನ್ನು ದೇವರಾಜ ಠಾಣೆಯ ಪೊಲೀಸರು ಪತ್ತೆ ಹಚ್ಚಿದ್ದು, ಒಬ್ಬನನ್ನು ಬಂಧಿಸಿ ಟ್ಯಾಬ್ ವಶಕ್ಕೆ ಪಡೆದಿದ್ದಾರೆ.
ಕಳೆದ ಸೆ.೧೩ ರಂದು ಆಸ್ಪತ್ರೆಯ ಸ್ಕಾö್ಯನಿಂಗ್ ರೂಂನಿಂದ ಬೆಲೆಬಾಳುವ ಈ ಟ್ಯಾಬ್ ಕಳುವಾಗಿತ್ತು. ದೂರು ದಾಖಲಿಸಿಕೊಂಡ ಪೊಲೀಸರು ತಾಂತ್ರಿಕ ಸಾಕ್ಷ್ಯಾಧಾರಗಳನ್ನು ಕಲೆಹಾಕಿ ಸೆ.೧೬ ರಂದು ಒಬ್ಬ ವ್ಯಕ್ತಿಯನ್ನು ಬಂಧಿಸಿ ಆತನ ಬಳಿಯಿಂದ ಮಾಲು ದಸ್ತಗಿರಿ ಮಾಡಿದರು.
ದೇವರಾಜ ಠಾಣೆಯ ಇನ್ಸ್ಪೆಕ್ಟರ್ ದಿವಾಕರ್ ಹಾಗೂ ಸಿಬ್ಬಂದಿಗಳು ಕಾರ್ಯಾಚರಣೆಯಲ್ಲಿ ಭಾಗವಹಿಸಿದ್ದು, ಪತ್ತೆ ಕಾರ್ಯವನ್ನು ಮೈಸೂರು ಪೊಲೀಸ್ ಆಯುಕ್ತರು ಶ್ಲಾಘಿಸಿದ್ದಾರೆ.