ಇಂದು ದಸರಾ ಗಜಪಡೆ ಮತ್ತು ಅಶ್ವಗಳಿಗೆ ಕೊನೆಯ ಫಿರಂಗಿ ತಾಲೀಮು


 ಸಂಗ್ರಹ ಚಿತ್ರ

ಮೈಸೂರು : ನಾಡಹಬ್ಬ ಮೈಸೂರು ದಸರಾ ಮಹೋತ್ಸವಕ್ಕೆ ಕ್ಷಣಗಣನೆ ಆರಂಭವಾಗಿದ್ದು, ಇಂದು ಶುಕ್ರವಾರ ಮದ್ಯಾಹ್ನ ಹನ್ನೆರಡು ಗಂಟೆಗೆ ಜಂಬೂ ಸವಾರಿಯಲ್ಲಿ ಭಾಗವಹಿಸುವ ಗಜಪಡೆ ಮತ್ತು ಅಶ್ವಗಳಿಗೆ ಕೊನೆಯ ಸುತ್ತಿನ ಫಿರಂಗಿ ತಾಲೀಮು ನಡೆಯಲಿದೆ.
ದಸರಾ ವಸ್ತು ಪ್ರದರ್ಶನ ಆವರಣದಲ್ಲಿ ನಡೆಯುವ ಈ ತಾಲೀಮಿನಲ್ಲಿ ಆನೆಗಳು ಮತ್ತು ಕುದುರೆಗಳು ಭಾಗಿಯಾಗುತ್ತವೆ. ಈ ಹಿಂದಿನ ಎರಡು ಫಿರಂಗಿ ತಾಲೀಮುಗಳು ಯಶಸ್ವಿಯಾಗಿದ್ದು, ಭಾರಿ ಸಿಡಿಮದ್ದಿನ ಶಬ್ದಕ್ಕೆ ಗಜಪಡೆ ಹಾಗೂ ಅಶ್ವಗಳು ವಿಚಲಿತವಾಗಲಿಲ್ಲ. 
ಅಕ್ಟೋಬರ್ 5ರಂದು ನಡೆಯಲಿರುವ ವಿಶ್ವವಿಖ್ಯಾತ ಜಂಬೂ ಸವಾರಿಯಲ್ಲಿ ಪಾಲ್ಗೊಳ್ಳಲಿರುವ ಗಜಪಡೆ ಮತ್ತು ಅಶ್ವಾರೋಹಿದಳದ ಕುದುರೆಗಳು ಸಾಂಪ್ರದಾಯಿಕ ಕುಶಾಲತೋಪಿನ ಭಾರೀ ಶಬ್ದಕ್ಕೆ ಬೆಚ್ಚದಂತೆ  ಹೊಂದಿಕೊಳ್ಳಲು ಅನುಕೂಲವಾಗಲೆಂದು ಫಿರಂಗಿ ತಾಲೀಮು  ನಡೆಸಲಾಗುತ್ತಿದ್ದು, ಇಂದು ವಸ್ತು ಪ್ರದರ್ಶನ ಮೈದಾನದ ವಾಹನ ನಿಲುಗಡೆ ಸ್ಥಳದಲ್ಲಿ ನಡೆದ ಫಿರಂಗಿ ತಾಲೀಮು ನಡೆಯಲಿದೆ ಎಂದು ಡಿಸಿಎಫ್ ಕರಿಕಾಳನ್ ತಿಳಿಸಿದ್ದಾರೆ.