ವರದಿ : ನಿಷ್ಕಲ ಎಸ್.ಗೌಡ, ಬನ್ನೂರು
ಮೈಸೂರು : ವಿವಿಧ ಸೇವಾ ಕಾರ್ಯಗಳ ಮೂಲಕ ಹಿರಿಯ ಕಾಂಗ್ರೆಸ್ ಮುಖಂಡ ಮತ್ತು ಡಿಸಿಸಿ ಉಪಾಧ್ಯಕ್ಷರಾದ ಎನ್.ಮಾದೇಗೌಡ ಅವರು ತಮ್ಮ ೬೬ನೇ ಹುಟ್ಟುಹಬ್ಬವನ್ನು ಅರ್ಥಪೂರ್ಣವಾಗಿ ಆಚರಿಸಿಕೊಂಡರು.
ರಾಜೇಂದ್ರ ನಗರ ಕೆಸರೆ ಬಡಾವಣೆಯ ತಮ್ಮ ಕಚೇರಿಯ ಬಳಿ ಮಂಗಳವಾರ ಬೆಳಗ್ಗೆ ಮೊಹಲ್ಲಾದ ನೂರಾರು ಜನರಿಗೆ ಮಹಾವೀರ್ ಜೈನ್ ಆಸ್ಪತ್ರೆಯ ವೈದ್ಯರು ಮತ್ತು ಸಿಬ್ಬಂದಿಗಳು ಕಣ್ಣು ತಪಾಸಣೆ ನಡೆಸಿದರು. ಈ ವೇಳೆ ಅಗತ್ಯವಿದ್ದವರಿಗೆ ಸ್ಥಳದಲ್ಲೇ ಉಚಿತವಾಗಿ ಕನ್ನಡಕ ವಿತರಣೆ ಮಾಡಲಾಯಿತು.
ಅಲ್ಲದೇ, ಮೊಹಲ್ಲಾದ ಸಾವಿರಾರು ಜನರಿಗೆ ಅನ್ನ ದಾಸೋಹ ಏರ್ಪಡಿಸಲಾಗಿತ್ತು. ವಿವಿಧ ಗಣ್ಯರು ಆಗಮಿಸಿ ಮಾದೇಗೌಡರಿಗೆ ಹುಟ್ಟುಹಬ್ಬದ ಶುಭಾಶಯ ಕೋರಿದರು.
ಈ ಸಂದರ್ಭದಲ್ಲಿ ಕೆಪಿಸಿಸಿ ವಕ್ತಾರ ಲಕ್ಷ್ಮಣ್ ಮಾತನಾಡಿ, ಮಾದೇಗೌಡರು ಯಾವುದೇ ಅಧಿಕಾರದ ಹಿಂದೆ ಬಿದ್ದವರಲ್ಲ, ಕಾಂಗ್ರೆಸ್ ಪಕ್ಷದ ಪ್ರಾಮಾಣಿಕ ಕಾರ್ಯಕರ್ತರು, ಎನ್‌ಆರ್ ಕ್ಷೇತ್ರದಲ್ಲಿ ಕಾಂಗ್ರೆಸ್ ಗೆಲ್ಲಲು ಅವರ ಸೇವೆ, ಹೋರಾಟ, ಪ್ರಾಮಾಣಿಕ ಸಂಘಟನೆ ಅಮೂಲ್ಯವಾಗಿದೆ. ಪಕ್ಷಕ್ಕೆ ಇವರು ಆಸ್ತಿ ಇದ್ದಂತೆ, ಬೇರೆಯವರ ರೀತಿ ಯಾವುದೇ ಆಡಂಬರಕ್ಕೆ ಹುಟ್ಟು ಹಬ್ಬ ಆಚರಿಸಿಕೊಳ್ಳದೆ, ನೇತ್ರ ತಪಾಸಣೆ ಮಾಡಿಸಿ ಸ್ಥಳದಲ್ಲೆ ಕನ್ನಡಕ ವಿತರಣೆ ಮಾಡುತ್ತಿರುವುದು ಶ್ಲಾಘನೀಯ,
ಇವರನ್ನು ಪಕ್ಷ ಗುರುತಿಸಿ ಸೂಕ್ತ ಸ್ಥಾನಮಾನ ನೀಡುತ್ತದೆ, ಅದಕ್ಕೆ ನಾವೂ ಸಹ ಅವರ ಬೆಂಬಲಕ್ಕೆ ನಿಲ್ಲುತ್ತೇವೆ ಎಂದರು. ಇದೇ ವೇಳೆ ಲಕ್ಷ್ಮಣ್ ಅವರು ಕನ್ನಡಕ ವಿತರಣೆ ಮಾಡಿದರು. ನಂತರ ನಗರ ಕಾಂಗ್ರೆಸ್ ಅಧ್ಯಕ್ಷ ಎನ್.ಮೂರ್ತಿ ಅವರೂ ಸಹ ಭೇಟಿ ನೀಡಿ ಮಾದೇಗೌಡರಿಗೆ ಶುಭಾಶಯ ಕೋರಿ ಹೊಸ ವರ್ಷದ ಕ್ಯಾಲೆಂಡರ್ ಬಿಡುಗಡೆ ಮಾಡಿದರು.
ಈ ಸಂದರ್ಭದಲ್ಲಿ ಲೋಕೇಶ್ ಗೌಡ , ರಜಿನಿ, ನಾಗರಾಜ್, ಶಾಂತರಾಜು, ರತನ್ ಕುಮಾರ್, ರಾಘವೇಂದ್ರ, ಮೋಹನ್, ಕೃಷ್ಣ, ರಾಜಣ್ಣ, ರವಿಕುಮಾರ್, ದೀಪು, ಚಿನ್ನತಾಯಮ್ಮ, ವೆಂಕಟೇಶ್, ಶಿವಕುಮಾರ್, ಸೇರಿದಂತೆ ಮೊಹಲ್ಲಾ ನಿವಾಸಿಗಳು ಉಪಸ್ಥಿತರಿದ್ದರು.




