ವರದಿ-ಶಾರೂಖ್ ಖಾನ್, ಹನೂರು
ಹನೂರು : ಹನೂರು ತಾಲೂಕಿನ ಚಿಗತಪುರ ಗ್ರಾಮದ ಉರ್ದು ಶಾಲೆ ಅವರಣದಲ್ಲಿ ಕಾಮಗೆರೆ ಹೋಲಿಕ್ರಾಸ್ ಆಸ್ಪತ್ರೆ ವತಿಯಿಂದ ಉಚಿತ ಆರೋಗ್ಯ ತಪಾಸಣೆ ಹಾಗೂ ರಕ್ತದಾನ ಶಿಬಿರ ನಡೆಯಿತು.
ಎಲ್ಲೆಮಾಳ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಸುತ್ತ ಮುತ್ತಲಿನ ಗ್ರಾಮಗಳಿಂದ ಆಗಮಿಸಿದ ನೂರಾರು ಜನರು ಅರೋಗ್ಯ ತಪಾಸಣೆಗೆ ಒಳಗಾದರು. ಶಿಬಿರದಲ್ಲಿ ಉಚಿತವಾಗಿ ಔಷದಿಗಳನ್ನೂ ಸಹ ನೀಡಲಾಯಿತು.
ಹಲವಾರು ರಕ್ತದಾನಿಗಳು ಸ್ವಯಂ ಪ್ರೇರಿತರಾಗಿ ರಕ್ತದಾನ ಮಾಡಿದ್ದು, ಶಿಬಿರದ ವಿಶೇಷವಾಗಿತ್ತು.
ಡಾ.ಇಮ್ರಾನ್, ಸಿಬ್ಬಂದಿಗಳಾದ ಆಮಿಷ, ಅನುμÁ, ಪುಷ್ಪ, ಮೂರ್ತಿ, ಡಯಾನಾ, ಸುಧಾ, ಮಂಜು, ನಂದಾ ಮತ್ತಿತರರು ಆರೋಗ್ಯ ತಪಾಸಣಾ ಶಿಬಿರದಲ್ಲಿ ಕಾರ್ಯ ನಿರ್ವಹಿಸಿದರು.
0 ಕಾಮೆಂಟ್‌ಗಳು