ಉಸ್ತುವಾರಿ ಸಚಿವರನ್ನು ದಸರಾ ಕಾರ್ಯಕ್ರಮದಿಂದ ಹೊರಗಿಡುವಂತೆ ಆಗ್ರಹ
ಮೈಸೂರು : ಬಿಡಿಎ ವಸತಿ ಯೋಜನೆಯಲ್ಲಿ ಅಕ್ರಮ ಟೆಂಡರ್ ಪ್ರಕ್ರಿಯೆ ನಡೆಸಿ 12 ಕೋಟಿ ಲಂಚ ಸ್ವೀಕಾರ ಆರೋಪಕ್ಕೆ ಗುರಿಯಾಗಿರುವ ಸಚಿವ ಎಸ್.ಟಿ.ಸೋಮಶೇಖರ್ ಅವರನ್ನು ಸಚಿವ ಸ್ಥಾನದಿಂದ ವಜಾ ಮಾಡಬೇಕೆಂದು ಒತ್ತಾಯಿಸಿ ಗಾಂಧಿನಗರದ ಅಂಬೇಡ್ಕರ್ ವೃತ್ತದಲ್ಲಿ ಪ್ರತಿಭಟನೆ ನಡೆಯಿತು.
ಪ್ರತಿಭಟನೆಯ ನೇತೃತ್ವ ವಹಿಸಿದ್ದ ಮೈಸೂರು ನಗರ ಕಾಂಗ್ರೆಸ್ ವಕ್ತಾರ ಎಸ್ ರಾಜೇಶ್ ಮಾತನಾಡಿ, ಸದರಿ ಬಿಡಿಎ ಬಹುಕೋಟಿ ಹಗರಣದಲ್ಲಿ ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಪುತ್ರ ವಿಜೇಯೆಂದ್ರ ಹಾಗೂ ಸಹಕಾರ ಸಚಿವ ಎಸ್.ಟಿ.ಸೋಮಶೇಖರ್ ಸೇರಿದಂತೆ 9 ಮಂದಿ ವಿರುದ್ಧ ಲೋಕಾಯುಕ್ತರು ಭ್ರμÁ್ಟಚಾರ ಕಾಯಿದೆಯಡಿ ಜನಪ್ರತಿನಿದಿಗಳ ವಿಶೇಷ ನ್ಯಾಯಾಲಯದಲ್ಲಿ ಆರೋಪಿತರ ವಿರುದ್ಧ ಪ್ರಕರಣ ದಾಖಲಿಸುವಂತೆ ಲೋಕಾಯುಕ್ತ ಪೊಲೀಸರಿಗೆ ಸೂಚಿಸಿದೆ. ಪ್ರಕರಣದಲ್ಲಿ ಎಸ್.ಟಿ. ಸೋಮಶೇಖರ್ 3ನೇ ಆರೋಪಿಯಾಗಿದ್ದು ಇಂತಹ ಆರೋಪಿಗಳನ್ನು ದಸರಾ ಚಟುವಟಿಕೆಯಿಂದ ಹೊರಗಿಡಬೇಕು. ಇಲ್ಲದಿದ್ದಲ್ಲಿ ದಸರಾ ಕಾರ್ಯಕ್ರಮವೂ ಪ್ರಾಮಾಣಿಕತೆಯಿಂದ ನಡೆಯುವುದಿಲ್ಲ ಎಂದು ವ್ಯಂಗ್ಯವಾಡಿದರು.
2012ರಲ್ಲಿ ಬೆಂಗಳೂರು ಪೂರ್ವ ತಾಲ್ಲೂಕು, ಬಿದರಳ್ಳಿ ಹೋಬಳಿ, ಕೋನದಾಸಪುರದಲ್ಲಿ ಬಿಡಿಎ ವಸತಿ ಯೋಜನೆಯಲ್ಲಿ ಪ್ಲಾಟ್‍ಗಳ ಗುತ್ತಿಗೆಯನ್ನು ಅಂದಿನ ಬಿಡಿಎ ಅಧ್ಯಕ್ಷ ಎಸ್.ಟಿ. ಸೋಮಶೇಖರ್ ಅವರ ಪ್ರಭಾವ ಹಾಗೂ ಒತ್ತಡದ ಮೆರೆಗೆ ಮೇ,ರಾಮಲಿಂಗಂ ಕನ್ಸ್‍ಟ್ರಕ್ಷನ್ ಕಂಪನಿಗೆ 666,22 ಕೋಟಿಗೆ ಟೆಂಡರ್ ನೀಡಲಾಗಿತ್ತು. ಕಂಪನಿಯಿಂದ ಶೆಲ್ ಕಂಪನಿಗಳ ಮೂಲಕ ಆರೋಪಿಗಳಿಗೆ 12 ಕೋಟಿ ಲಂಚ ನೀಡಲಾಗಿದೆ. ಇಂತಹ ಭ್ರಷ್ಟ ಸಚಿವರಿಂದ ಮೈಸೂರು ದಸರಾ ಉಸ್ತುವಾರಿಗೆ ಕಳಂಕ ಬರುತ್ತದೆ. ಭವ್ಯ ಪರಂಪರೆ ಹೊಂದಿರುವ ಮೈಸೂರು ದಸರಾಕ್ಕೆ ಕಳಂಕ ತರುವುದು ಬೇಡ. ಕೂಡಲೇ ರಾಜ್ಯ ಸರ್ಕಾರ ಮೈಸೂರು ಜಿಲ್ಲಾ ಉಸ್ತುವಾರಿಯಿಂದ ಸೋಮಶೇಖರ್ ಅವರನ್ನು ಬಿಡುಗಡೆಗೊಳಿಸಿ ಸಚಿವ ಸ್ಥಾನದ ರಾಜೀನಾಮೆ ಪಡೆಯಬೇಕು. ಸೋಮಶೇಖರ್ ಅಧಿಕಾರದಲ್ಲಿ ಮುಂದುವರಿದರೆ ಸಾಕ್ಷ್ಯಗಳನ್ನು ನಾಶ ಪಡಿಸುವ ಸಾಧ್ಯತೆ ಇದೆ. ನಿಸ್ಪಕ್ಷಪಾತವಾಗಿ ತನಿಖೆ ನಡೆಸಲು ಅಸಾಧ್ಯ ಎಂದು ರಾಜೇಶ್ ಹೇಳಿದರು.
ಪ್ರತಿಭಟನೆಯಲ್ಲಿ ನಗರ ಕಾಂಗ್ರೆಸ್ ಉಪಾಧ್ಯಕ್ಷ ಮಂಟೆಲಿಂಗಯ್ಯ, ಮುಖಂಡ ವಿಶ್ವರಾಜ್, ಪ್ರವೀಣ್ ಜಿಎಲ್, ರಾಕೇಶ್ ಕುಮಾರ್, ರಹೀಮ್, ಉದಯ್ ಕುಮಾರ್, ಬಾಬು, ಮಹೇಶ್ ಇದ್ದರು.
0 ಕಾಮೆಂಟ್‌ಗಳು