ವರದಿ-ಶಾರೂಖ್ ಖಾನ್, ಹನೂರು
ಹನೂರು: ಕಾಡು ಪ್ರಾಣಿಯ ದಾಳಿಗೆ ಮೃತಪಟ್ಟ ಕೆವಿಎನ್ ದೊಡ್ಡಿ ಗ್ರಾಮದ ಗೋವಿಂದಯ್ಯ ಅವರ ಮನೆಗೆ ರಾಜ್ಯ ಜೆಡಿಎಸ್ ಉಪಾಧ್ಯಕ್ಷ ಹಾಗೂ ಜಿಲ್ಲಾ ಜೆಡಿಎಸ್ ಅಧ್ಯಕ್ಷರಾದ ಎಂ.ಆರ್.ಮಂಜುನಾಥ್ ಅವರು ಭೇಟಿ ನೀಡಿ ಕುಟುಂಬಸ್ಥರಿಗೆ ಸಾಂತ್ವನ ಹೇಳಿದ್ದಾರೆ.
ಚಿರತೆ ದಾಳಿಗೆ ಗೋವಿಂದಯ್ಯ ಎಂಬವರು ಮೃತಪಟ್ಟಿದ್ದರು. ವಿಷಯ ತಿಳಿದ ಜೆಡಿಎಸ್ ಮಂಜುನಾಥ್ ಅವರು ಮೃತ ಕುಟುಂಬಸ್ಥರ ಮನೆಗೆ ಭೇಟಿ ನೀಡಿ ಧೈರ್ಯ ತುಂಬಿದ ಅವರು ಆರ್ಥಿಕ ಸಹಾಯ ಮಾಡಿದ್ದಾರೆ.
ಈ ಬಗ್ಗೆ ಮಾತನಾಡಿದ ಮಂಜುನಾಥ್ ಅವರು, ಮೃತ ಗೋವಿಂದಯ್ಯ ಅವರ ಕುಟುಂಬಕ್ಕೆ ಆದಷ್ಟು ಬೇಗ ಸರ್ಕಾರದ ಪರಿಹಾರ ಸಿಗುವಂತೆ ಸಂಬಂಧಪಟ್ಟ ಅಧಿಕಾರಿಗಳ ಜೊತೆಗೆ ಚರ್ಚಿಸಲಾಗುವುದು. ಗ್ರಾಮಸ್ಥರು ರೈತರು ಜಾಗೃತರಾಗಿ ಇರಬೇಕು ಈಗಾಗಲೇ ಅರಣ್ಯ ಇಲಾಖೆಗೆ ಅಧಿಕಾರಿಗಳು ದಾಳಿ ಮಾಡಿರುವ ಕಾಡುಪ್ರಾಣಿ ಚಿರತೆ ಅಥವಾ ಹುಲಿ ಯಾವುದೆಂದು ಪತ್ತೆ ಹಚ್ಚಲು ಸಿಸಿ ಕ್ಯಾಮೆರಾವನ್ನು ಅಳವಡಿಸಿದ್ದಾರೆ. ಜೊತೆಗೆ ಬೋನನ್ನು ಇಟ್ಟು ಸೆರೆ ಹಿಡಿಯಲು ಕಾರ್ಯಾಚರಣೆ ನಡೆಸುತ್ತಿದ್ದಾರೆ ಗ್ರಾಮಸ್ಥರು ಯಾವುದೇ ಆತಂಕಕ್ಕೆ ಒಳಗಾಗದೆ ಎಚ್ಚರಿಕೆಯಿಂದ ಇರಬೇಕು ಎಂದು ಸಲಹೆ ನೀಡಿದರು.
0 ಕಾಮೆಂಟ್‌ಗಳು