ಮೈಸೂರಿನ ಡಾ.ಆಗರ್ವಾಲ್ಸ್ ಕಣ್ಣಿನ ಆಸ್ಪತ್ರೆಯಲ್ಲಿ ದಶಮಾನೋತ್ಸವ ಸಂಭ್ರಮ : ಮಾಜಿ ಸಂಸದ ಪ್ರತಾಪ್ ಸಿಂಹ ಉದ್ಘಾಟನೆ, ಶುಭ ಹಾರೈಕೆ

ವರದಿ : ನಿಷ್ಕಲ ಎಸ್., ಮೈಸೂರು

ಮೈಸೂರು: 10 ವರ್ಷಗಳ ಯಶಸ್ವಿ ಸೇವೆಯನ್ನು ಪೂರೈಸಿರುವ ಮೈಸೂರಿನ ಡಾ.ಅಗರ್ವಾಲ್ಡ್ ಕಣ್ಣಿನ ಆಸ್ಪತ್ರೆಯಲ್ಲಿ ಬುಧವಾರ 10 ವರ್ಷದ ಸಂಭ್ರಮಾಚರಣೆ ನಡೆಯಿತು.

ಆಸ್ಪತ್ರೆ ಆವರಣದಲ್ಲಿ ನಡೆದ ಸಂಭ್ರಮಾಚರಣೆ ಕಾರ್ಯಕ್ರಮವನ್ನು ಮಾಜಿ ಸಂಸದ ಪ್ರತಾಪ್‌ಸಿಂಹ ಉದ್ಘಾಟಿಸಿದರು.

ನಂತರ ಅವರು ಮಾತನಾಡಿ, ಡಾ.ಅಗರ್‌ವಾಲ್ಸ್ ಕಣ್ಣಿನ ಆಸ್ಪತ್ರೆಯ 10 ವರ್ಷಗಳ ಯಶಸ್ವಿ ಪಯಣ ಒಂದು ದೊಡ್ಡ ಸಾಧನೆಯಾಗಿದೆ. ಕಣ್ಣು ನಮ್ಮ ದೇಹದ ಅಮೂಲ್ಯವಾದ ಅಂಗ ಅದರ ರಕ್ಷಣೆ ಎನ್ನುವುದು ಅತ್ಯಂತ ಸೂಕ್ಷö್ಮ ವಿಚಾರ. ಈ ನಿಟ್ಟಿನಲ್ಲಿ ಅಗರ್‌ವಾಲ್ ಆಸ್ಪತ್ರೆಯು ಈ ಸಾಧನೆಯು ನಿರಂತರವಾಗಿ ಮುನ್ನಡೆಯಲಿ ಎಂದು ಶುಭ ಕೋರಿದರು.

ಮುಖ್ಯ ಅತಿಥಿಗಳಾಗಿ ಆಗಮಿಸಿದ್ದ ಡಿಸಿಪಿ ಸಿದ್ದನಗೌಡ ಪಾಟೀಲ್ ಅವರು ಮಾತನಾಡಿ, ಡಾ.ಅಗರ್‌ವಾಲ್ಸ್ ಕಣ್ಣಿನ ಆಸ್ಪತ್ರೆಯು 10 ವರ್ಷಗಳ ಯಶಸ್ವಿ ಸಾಧನೆಗೆ ಇಲ್ಲಿನ ವೈದ್ಯರು ಮತ್ತು ಸಿಬ್ಬಂದಿ ವರ್ಗದವರ ಸೇವೆ ಕಾರಣವಾಗಿದೆ. ಈ ಯಶಸ್ವಿ ಪಯಣ ಹೀಗೆಯೇ ಮುಂದುವರಿಯಲಿ ಎಂದರು.

ವೈದ್ಯಕೀಯ ವಿಭಾಗದ ಮುಖ್ಯಸ್ಥರಾದ ಡಾ.ಕವಿತಾ ವಾಡಿ ಮಾತನಾಡಿ, ಮೈಸೂರಿನ ಡಾ.ಅಗರ್‌ವಾಲ್ಸ್ ಆಸ್ಪತ್ರೆಯು ಉನ್ನತ ಮಟ್ಟದ ಕಣ್ಣಿನ ಆರೈಕೆಗೆ ಹೆಸರಾಗಿದೆ. ಇಲ್ಲಿ ಪರಿಣಿತ ವೈದ್ದಯರಿಂದ ಶಸ್ತçಚಿಕಿತ್ಸೆ ನಡೆಸಲಾಗುತ್ತಿದ್ದು, ಇದುವರೆಗೂ ಉತ್ತಮ ಫಲಿತಾಂಶ ಹೊಂದಿದ್ದೇವೆ. 2016ರಲ್ಲಿ ಮೈಸೂರಿನಲ್ಲಿ ಪ್ರಾರಂಭವಾದ ಡಾ. ಅಗರ್ವಾಲ್ ಕಣ್ಣಿನ ಆಸ್ಪತ್ರೆಯು ಕ್ಯಾಟರಾಕ್ಟ್ ವಿಶೇಷ ಆಸ್ಪತ್ರೆಯಿಂದ ಆರಂಭವಾಗಿ ಇಂದು ಏಳು ಕೇಂದ್ರಗಳ ಜಾಲವಾಗಿ ವಿಸ್ತರಿಸಿದೆ, ಈ ಆಸ್ಪತ್ರೆಗಳು ಕ್ಯಾಟರಾಕ್ಟ್, ರೆಟಿನಾ ಗ್ಲೊಕೋಮಾ ಹಾಗೂ ರಿಫ್ರಾಕ್ಟಿವ್ ಸೇವೆಗಳಂತಹ ತೃತೀಯ ಮಟ್ಟದ ಚಿಕಿತ್ಸೆಯನ್ನು ಒದಗಿಸುತ್ತಿವೆ. ಮೈಸೂರು ಹಾಗೂ ಸುತ್ತಮುತ್ತಲಿನ ಜನರಿಗೆ ಕಡಿಮೆ ವೆಚ್ಚದಲ್ಲಿ ಗುಣಮಟ್ಟದ ಕಣ್ಣಿನ ಆರೈಕೆಯನ್ನು ಒದಗಿಸುತ್ತಿದೆ ಎಂದರು.

ಹೆಸರಾAತ ಕಣ್ಣಿನ ತಜ್ಞ ವೈದ್ಯರಾದ ಡಾ.ಪವನ ಪಿ.ಜೋಶಿ ಅವರು ಮಾತನಾಡಿ, ಒಬ್ಬ ರೋಗಿ ವರ್ಟಿಗೋ ಸಮಸ್ಯೆಯಿಂದ ಬಳಲುತ್ತಿದ್ದರು. ಈ ಸ್ಥಿತಿಯಲಿ. ದೀರ್ಘಕಾಲ ನೇರವಾಗಿ ಮಲಗುವುದು ಕಷ್ಟವಾಗುವುದರಿಂದ ಸಾಮಾನ್ಯ ಕ್ಯಾಟರಾಕ್ಟ್ ಶಸ್ತçಚಿಕಿತ್ಸೆ ಸವಾಲಾಗಿತ್ತು. ಆದರೆ ಸೂಕ್ಷ÷್ಮ ಮೌಲ್ಯಮಾಪನ, ವಿಶೇಷ ಶರೀರ ಸ್ಥಿತಿ ಹಾಗೂ ನಿಖರ ಶಸ್ತçಚಿಕಿತ್ಸಾ ಯೋಜನೆಯ ಮೂಲಕ ವೈದ್ಯಕೀಯ ತಂಡ ಯಶಸ್ವಿಯಾಗಿ ಆ ರೋಗಿಗೆ ಶಸ್ತçಚಿಕಿತ್ಸೆ.. ನಡೆಸಿ, ಗಂಭೀರವಾಗಿ ಹಾನಿಗೊಳಗಾಗಿದ್ದ ದೃಷ್ಟಿಯನ್ನು ಮರುಸ್ಥಾಪಿಸಿತು ಎಂದು ಹೇಳಿದರು.

ಇದೇ ರೀತಿ ಮತ್ತೊಬ್ಬ 85 ವರ್ಷದ ಮಹಿಳೆ ಗಂಭೀರ ಮಟ್ಟದ ಪರಿಪಕ್ವ ಕ್ಯಾಟರಾಕ್ಟ್ ಸಮಸ್ಯೆಯಿಂದ ಬಳಲುತ್ತಿದ್ದರು. ಅವರ ಸಮಸ್ಯೆಯ ಸಂಕೀರ್ಣತೆಯಿAದಾಗಿ ಇತರರು ಶಸ್ತçಚಿಕಿತ್ಸೆ ಸಾಧ್ಯವಿಲ್ಲ ಎಂದು ಪರಿಗಣಿಸಿದ್ದರು. ಆದರೆ ಮತ್ತು ಶಸ್ತçಚಿಕಿತ್ಸಾ ತಂಡ ಸೂಕ್ಷ÷್ಮವಾಗಿ ಪರಿಶೀಲಿಸಿ ಯಶಸ್ವಿಯಾಗಿ ಚಿಕಿತ್ಸೆ ನೀಡಿ ಅವರ ದೃಷ್ಟಿ ಮತ್ತು ಸ್ವಾವಲಂಬನೆಯನ್ನು ಮರುಸ್ಥಾಪಿಸಿದರು. ಈ ಯಶಸ್ಸು ಆಸ್ಪತ್ರೆಯ ಉನ್ನತ ತಂತ್ರಜ್ಞಾನ, ಶಸ್ತçಚಿಕಿತಾ ಕೌಶಲ್ಯ ಹಾಗೂ ರೋಗಿ ಕೇಂದ್ರಿತ ಆಕೆಯ ಬದ್ಧತೆಯನ್ನು ತೋರಿಸುತ್ತದೆ ಎಂದು ಹೆಮ್ಮೆಯಿಂದ ನುಡಿದರು.

ಇದೇ ವೇಳೆ ರೋಗಿಗಳು ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದರು. ಕಾರ್ಯಕ್ರಮದಲ್ಲಿ ಗಣ್ಯರನ್ನು ಗೌರವಿಸಲಾಯಿತು. ಧೀರಜ್ ಇತರರು ಇದ್ದರು.