ವರದಿ : ನಿಷ್ಕಲ ಎಸ್., ಮೈಸೂರು
ಮೈಸೂರು : ನರ್ಸಿಂಗ್ ಸೇವೆ ಅತ್ಯುತ್ತಮ ಸೇವೆಯಾಗಿದ್ದು, ಪದವಿ ಪಡೆದ ತಾವೆಲ್ಲರೂ ಮುಂದೆ ಸೇವಾ ಮನೋಭಾವದಿಂದ ಕೆಲಸ ಮಾಡಬೇಕು ಎಂದು ಜಯದೇವ ಹೃದ್ರೋಗ ವಿಜ್ಞಾನ ಮತ್ತು ಸಂಶೋಧನಾ ಸಂಸ್ಥೆಯ ಕಾರ್ಡಿಯಾಲಜಿ ಮೆಡಿಕಲ್ ಸೂಪರಿಟೆಂಡೆಂಟ್ ಡಾ. ಸದಾನಂದ ಹೇಳಿದರು.
ನಗರದ ಜೆ.ಕೆ.ಗ್ರೌಂಡ್‌ನಲ್ಲಿರುವ ಮೈಸೂರು ಮೆಡಿಕಲ್ ಕಾಲೇಜು ಮಿಲಿನಿಯಂ ಸಭಾಂಗಣದಲ್ಲಿ ಸಿಗ್ಮಾ ನರ್ಸಿಂಗ್ ಕಾಲೇಜು ಮತ್ತು ಆಲೈಡ್ ಸೈನ್ಸ್ ಕಾಲೇಜಿನವರು ಏರ್ಪಡಿಸಿದ್ದ ಪದವಿ ಪ್ರಧಾನ ಸಮಾರಂಭದಲ್ಲಿ ಪದವಿ ಪ್ರದಾನ ಮಾಡಿ ಅವರು ಮಾತನಾಡಿದರು.
ಶಿಸ್ತಿನಿಂದ ಕಲಿತ ಈ ನರ್ಸಿಂಗ್ ಪದವಿ ಮುಂದೆ ನಿಮ್ಮ ಉಜ್ವಲ ಭವಿಷ್ಯಕ್ಕೆ ಸಹಕಾರಿಯಾಗಲಿ ಹಾರೈಸಿದ ಡಾ.ಸದಾನಂದ ಅವರು, ರ‍್ಯಾಂಕ್, ಡಿಸ್ಟಿಂಕ್ಷನ್ ಮತ್ತು ಉತ್ತೀರ್ಣರಾದ ಎಲ್ಲ ವಿದ್ಯಾರ್ಥಿಗಳಿಗೆ ಪದವಿ ಮತ್ತು ಪ್ರಶಸ್ತಿ ಪತ್ರವನ್ನು ವಿತರಿಸಿದರು.
ಅಲೈಡ್ ಹೆಲ್ತ್ ಸೈನ್ಸ್ ಪ್ರಿನ್ಸಿಪಲ್ ಡಾ.ಕೆ. ಮಾದಪ್ಪ ಅವರು ಮಾತನಾಡಿ, ನಮ್ಮ ಕಾಲೇಜಿನಲ್ಲಿ ಪ್ರತಿವರ್ಷ ವಿದ್ಯಾರ್ಥಿಗಳ ಸಂಖ್ಯೆ ಹೆಚ್ಚಾಗುತ್ತಿದ್ದು ಅಷ್ಟೇ ಉತ್ತಮ ಫಲಿತಾಂಶ ಕೊಡುತ್ತಿರುವುದು ಸಂತೋಷ ತಂದಿದೆ. ಇದರಲ್ಲಿ ನಮ್ಮ ಕಾಲೇಜಿನ ಸಿಬ್ಬಂದಿ ವರ್ಗದ ಪರಿಶ್ರಮ ಹಾಗೂ ವಿದ್ಯಾರ್ಥಿಗಳ ಕಲಿಕೆ ತುಂಬಾ ಚೆನ್ನಾಗಿರುವುದರಿಂದಲೇ ಈ ಫಲಿತಾಂಶ ಮೈಸೂರಿನಲ್ಲೇ ಪ್ರಥಮ ಸ್ಥಾನ ಬಂದಿರುವುದು ಕಾಲೇಜಿಗೆ ಹೆಮ್ಮೆ ತಂದಿದೆ ಎಂದು ಎಲ್ಲಾ ಸಿಬ್ಬಂದಿಗಳಿಗೆ, ವಿದ್ಯಾರ್ಥಿಗಳಿಗೆ ಶುಭ ಕೋರಿದರು.
ಗೌರವ ಅತಿಥಿ ವಿಶ್ವ ಶಾಂತಿ ಸಂಸ್ಥೆಯ ಕಾರ್ಯದರ್ಶಿಗಳಾದ ಎನ್.ಬಿ. ಮಹಾಲಿಂಗಯ್ಯ ಅವರು ಮಾತನಾಡಿ, ವಿಶ್ವಶಾಂತಿ ಸಂಸ್ಥೆ ಮತ್ತು ಸಿಗ್ಮಾ ಫೌಂಡೇಶನ್ ಆರೋಗ್ಯ ಮತ್ತು ಶಿಕ್ಷಣಕ್ಕೆ ೨೦೧೨ರಲ್ಲಿ ಆಸ್ಪತ್ರೆಯನ್ನು ಆರೋಗ್ಯ ಸೇವೆಗೆಂದು ಮಾಡಿ ನಂತರ ೨೦೧೯ ರಲ್ಲಿ ಶಿಕ್ಷಣದ ದೃಷ್ಟಿಯಿಂದ ಸಿಗ್ಮಾ ಮತ್ತು ವಿಎಸ್‌ಎಸ್ ಜೊತೆಗೂಡಿ ನರ್ಸಿಂಗ್ ಕಾಲೇಜನ್ನು ಪ್ರಾರಂಭ ಮಾಡಿದ್ದು ಈಗ ವಿದ್ಯಾರ್ಥಿಗಳ ಸಾಧನೆಯನ್ನು ನೋಡಿದರೆ ಕಾಲೇಜಿನ ಪ್ರಾಂಶುಪಾಲರು ಹಾಗೂ ಸಿಬ್ಬಂದಿಯನ್ನು ಮೆಚ್ಚಬೇಕು ಎಂದು ಎಲ್ಲರಿಗೂ ಶುಭ ಕೋರಿದರು.
ಟ್ರಸ್ಟಿಗಳಾದ ಡಾ. ರಾಜೇಶ್ವರಿ ಮಾದಪ್ಪ, ಶೈಲಾ ಶಂಕರ್ ಅವರು ರ‍್ಯಾಂಕ್ ಪಡೆದ ವಿದ್ಯಾರ್ಥಿಗಳಿಗೆ ಶುಭ ಹಾರೈಸಿ ಹೊಸ ವಿದ್ಯಾರ್ಥಿಗಳಿಗೂ ಶುಭ ಕೋರಿದರು.
ಈ ಸಂದರ್ಭದಲ್ಲಿ ಅಲೈಡ್ ಹೆಲ್ತ್ ಸೈನ್ಸ್ ಮ್ಯಾನೇಜಿಂಗ್ ಟ್ರಸ್ಟಿ ಜ್ಞಾನ ಶಂಕರ್, ಟ್ರಸ್ಟಿಗಳಾದ ಡಾ.ರಾಜೇಶ್ವರಿ ಮಾದಪ್ಪ, ಶೈಲಾಶಂಕರ್, ಸಿಗ್ಮಾ ನರ್ಸಿಂಗ್ ಕಾಲೇಜಿನ ಪ್ರಾಂಶುಪಾಲರಾದ ಪ್ರೊ. ಮಂಜುನಾಥ್ ಮತ್ತು ಕಾಲೇಜಿನ ಸಿಬ್ಬಂದಿ ಹಾಗೂ ವಿದ್ಯಾರ್ಥಿಗಳು ಹಾಜರಿದ್ದರು.

