ವರದಿ: ನಿಷ್ಕಲ ಎಸ್., ಮೈಸೂರು
ಮೈಸೂರು: ಹೊಸ ವರ್ಷದಲ್ಲಿ ಉತ್ತಮ ಮಳೆ, ಬೆಳೆಯಾಗಿ ದೇಶದ ಜನರು ಸುಖಃ, ಶಾಂತಿಯಿಂದ ಬದುಕಲಿ ಎಂಬ ಸಂಕಲ್ಪದೊಂದಿಗೆ ಶ್ರೀ ಯೋಗಾನರಸಿಂಹಸ್ವಾಮಿ ದರ್ಶನ ಪಡೆದು, ಪ್ರೊ.ಭಾಷ್ಯಂ ಸ್ವಾಮೀಜಿ ಅವರು ಆಶೀರ್ವಾದ ಪಡೆದಿದ್ದೇನೆ ಎಂದು ಕಾವೇರಿ ಕ್ರಿಯಾ ಸಮಿತಿ ಅಧ್ಯಕ್ಷ ಮತ್ತು ಹೆಸರಾಂತ ಕನ್ನಡ ಚಿತ್ರನಟ ಡೇರಿಂಗ್ ಸ್ಟಾರ್ ಜಯಪ್ರಕಾಶ್(ಜೆಪಿ) ಹೇಳಿದರು.
ಹೊಸ ವರ್ಷದ ಪ್ರಯುಕ್ತ ವಿಜಯನಗರದಲ್ಲಿರುವ ಶ್ರೀ ಯೋಗಾನರಸಿಂಹಸ್ವಾಮಿ ದೇವಾಲಯಕ್ಕೆ ಭೇಟಿ ನೀಡಿ, ದೇವರ ದರ್ಶನದ ಬಳಿಕ ಪ್ರೊ.ಭಾಷ್ಯಂ ಸ್ವಾಮೀಜಿ ಅವರ ಆಶೀರ್ವಾದ ಪಡೆದು ಕನ್ನಡ ಸೇನಾಪಡೆ ಸಂಘಟನೆಯ ಕ್ಯಾಲೆಂಡರ್ ಬಿಡುಗಡೆ ಸಮಾರಂಭದಲ್ಲಿ ಭಾಗವಹಿಸಿ ಮಾಧ್ಯಮದವರೊಂದಿಗೆ ಮಾತನಾಡಿದರು.
ಕಳೆದ ವರ್ಷ ರಾಜ್ಯದಲ್ಲಿ ಉತ್ತಮ ಮಳೆಯಾಗಿದೆ. ಕೆಆರ್‌ಎಸ್ ಸೇರಿದಂತೆ ರಾಜ್ಯದ ಎಲ್ಲ ಜಲಾಶಯಗಳೂ ಭರ್ತಿಯಾಗಿ ಯಾವುದೇ ನೀರಿನ ಸಮಸ್ಯೆ ಉದ್ಭವ ಆಗಿಲ್ಲ, ಇದರಿಂದ ಕಳೆದ ವರ್ಷ ತಮಿಳುನಾಡಿಗೂ ಕರ್ನಾಟಕ ರಾಜ್ಯಕ್ಕೂ ಕಾವೇರಿ ಸಮಸ್ಯೆ ಉದ್ಭವವಾಗಿಲ್ಲ, ಇದೇ ರೀತಿ ಈ ವರ್ಷವೂ ಉತ್ತಮ ಮಳೆಯಾಗಿ ಯಾವುದೇ ಸಮಸ್ಯೆ ಉಂಟಾಗಬಾರದು ಎನ್ನುವುದೇ ನಮ್ಮ ಬಯಕೆ ಎಂದ ಅವರು, ಮುಂದೆ ಇಂತಹ ಸಮಸ್ಯೆಗಳು ಬಾರದಂತೆ ಕೇಂದ್ರ ಸರ್ಕಾರ ರಾಷ್ಟ್ರೀಯ ಜಲನೀತಿ ಪರಿಷ್ಕರಣೆ ಮಾಡಬೇಕು ಎಂದು ಆಗ್ರಹಿಸಿದರು.
ಇದೇ ವೇಳೆ ವಿಧಾನ ಪರಿಷತ್ ಸದಸ್ಯರಾದ ಸಿ.ಎನ್. ಮಂಜೇಗೌಡ ಕ್ಯಾಲೆಂಡರ್ ಬಿಡುಗಡೆ ಮಾಡಿದರು.
ಈ ಸಂದರ್ಭದಲ್ಲಿ ಯೋಗಾನರಸಿಂಹ ಸ್ವಾಮಿ ದೇವಸ್ಥಾನದ ಆಡಳಿತಾಧಿಕಾರಿ ಶ್ರೀನಿವಾಸನ್, ಡಾ.ರಘುರಾಂ ಕೆ. ವಾಜಪೇಯಿ, ರಾಜ್ಯ ಒಕ್ಕಲಿಗರ ಸಂಘದ ಪ್ರಧಾನ ಕಾರ್ಯದರ್ಶಿ ಸಿ.ಜಿ. ಗಂಗಾಧರ್, ಮೈಸೂರು ವಾಣಿಜ್ಯ ಮತ್ತು ಕೈಗಾರಿಕಾ ಸಂಸ್ಥೆ ಅಧ್ಯಕ್ಷ ಕೆ.ಬಿ. ಲಿಂಗರಾಜು, ಮೈಸೂರು ಚಾಮರಾಜನಗರ ಸಹಕಾರಿ ಬ್ಯಾಂಕ್ ನಿರ್ದೇಶಕ ಡಾ.ಎಂ.ಬಿ. ಮಂಜೇಗೌಡ, ಗೋವಿಂದೇಗೌಡ ಬಿ.ಹೆಚ್., ಎಂ.ಎನ್. ದೊರೆಸ್ವಾಮಿ, ಜಯಣ್ಣ, ಕರ್ನಾಟಕ ಸೇನಾ ಪಡೆ ಅಧ್ಯಕ್ಷ ತೇಜೇಶ್ ಲೋಕೇಶ್ ಗೌಡ, ನರಸಿಂಹೇಗೌಡ, ಪ್ರಭುಶಂಕರ, ಸುಬ್ಬೇಗೌಡ, ಸಿಂದುವಳ್ಳಿ ಶಿವಕುಮಾರ್, ನೇಹಾ, ಭಾಗ್ಯಮ್ಮ, ಶಿವಲಿಂಗಯ್ಯ, ಪ್ರಭಾಕರ್, ಗಣೇಶ್, ಬೋಗಾದಿ ಸಿದ್ದೇಗೌಡ, ಕೃಷ್ಣಪ್ಪ, ಕುಮಾರ್, ಕೃಷ್ಣೇಗೌಡ, ಹೊನ್ನೇಗೌಡ, ಜ್ಯೋತಿ, ಸುಜಾತಾ, ಶಿವರಾಂ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.
