ವರದಿ: ನಿಷ್ಕಲ ಎಸ್., ಮೈಸೂರು
ಮೈಸೂರು : ಕರ್ನಾಟಕ ರಾಜ್ಯ ನಾಯಕ ಜನಾಂಗದ ಹಿತರಕ್ಷಣಾ ವೇದಿಕೆಯಿಂದ ಶ್ರೀ ಮಹರ್ಷಿ ವಾಲ್ಮೀಕಿ ಜಯಂತಿ, ಕನ್ನಡ ರಾಜ್ಯೋತ್ಸವ ಹಾಗೂ ವಿವಿಧ ಕ್ಷೇತ್ರದ ಸಾಧಕರಿಗೆ ವಾಲ್ಮೀಕಿ ಸೇವಾ ರತ್ನ ಪ್ರಶಸ್ತಿ ಪ್ರದಾನ ಕಾರ್ಯಕ್ರಮ ನಡೆಯಿತು.
ನಗರದ ರೋಟರಿ ಸಭಾಂಗಣದಲ್ಲಿ ಭಾನುವಾರ ಬೆಳಗ್ಗೆ ನಡೆದ ಕಾರ್ಯಕ್ರಮವನ್ನು ವೇದಿಕೆಯಲ್ಲಿದ್ದ ಗಣ್ಯರು ದೀಪ ಬೆಳಗಿಸಿ ಉದ್ಘಾಟಿಸಿ, ಶ್ರೀ ಮಹರ್ಷಿ ವಾಲ್ಮೀಕಿ ಅವರ ಭಾವಚಿತ್ರಕ್ಕೆ ಪುಷ್ಪಾರ್ಚನೆ ಸಲ್ಲಿಸಿದರು.
ಈ ಸಂದರ್ಭದಲ್ಲಿ ಶಾಸಕ ಜಿ.ಟಿ.ದೇವೇಗೌಡ ಅವರು ಮಾತನಾಡಿ, ನಮ್ಮ ಕನ್ನಡ ನೆಲದಲ್ಲಿಯೇ ಕನ್ನಡ ಭಾಷೆ, ನೆಲ, ಜಲ, ಉಳಿಸಲು ನಾವುಗಳು ಹೋರಾಟ ಮಾಡಬೇಕಿರುವುದು ವಿಪರ್ಯಾಸದ ಸಂಗತಿಯಾಗಿದ್ದು, ನಮ್ಮ ನಾಡಿಗೆ ಕುಂದು ಉಂಟಾದರೆ ಹೋರಾಟಕ್ಕೆ ನಾವೆಲ್ಲರೂ ಸಿದ್ದರಾಗಬೇಕಿದೆ ಎಂದು ಹೇಳಿದರು.
ಕರ್ನಾಟಕ ರಾಜ್ಯದ ನಿರ್ಮಾಣದಲ್ಲಿ ಹಲವಾರು ಮಹನೀಯರ ಕೊಡುಗೆ ಇದೆ, ಇದರಲ್ಲಿ ಕನ್ನಡ ಚಳವಳಿಗಾರರ ಪಾತ್ರವೂ ದೊಡ್ಡದು ಎಂದ ಅವರು, ಮಹರ್ಷಿ ವಾಲ್ಮೀಕಿ ಅವರು ರಾಮಾಯಣ ಕೃತಿಯನ್ನು ಬರೆಯುವ ಮೂಲಕ ಸಮಾಜದಲ್ಲಿ ತಂದೆ, ತಾಯಿ, ಸಹೋದರರು, ಬಂಧು ಬಳಗ ಹೇಗೆ ತಮ್ಮ ತಮ್ಮ ಕರ್ತವ್ಯ ನಿರ್ವಹಿಸಬೇಕು ಎಂದು ಕೃತಿಯ ಮೂಲಕ ಜಗತ್ತಿಗೆ ತೋರಿಸಿದ್ದಾರೆ. ಇಂತಹ ಮಹನೀಯರ ಜಯಂತಿಯನ್ನು ಎಲ್ಲ ಸಮುದಾಯದ ಜನರು ಒಟ್ಟಾಗಿ ಸೇರಿ ಆಚರಿಸಬೇಕು ಎಂದರು.
ಇದೇ ವೇಳೆ ಜಿಪಂ ಮಾಜಿ ಅಧ್ಯಕ್ಷರಾದ ಎಂ.ರಾಮಚಂದ್ರು, ಮಹರ್ಷಿ ವಾಲ್ಮೀಕಿ ಗುರುಕುಲ ಸೇವಾ ಟ್ರಸ್ಟ್ ಅಧ್ಯಕ್ಷರಾದ ಶ್ರೀನಿವಾಸನಾಯಕ, ಮೈಸೂರು ಜಿಲ್ಲಾ ಗ್ರಾಮಾಂತರ ಬಿಜೆಪಿ ಅಧ್ಯಕ್ಷರಾದ ಕುಂಬ್ರಳ್ಳಿ ಸುಬ್ಬಣ್ಣ, ಮಹರ್ಷಿ ವಾಲ್ಮೀಕಿ ಗುರುಕುಲ ಸೇವಾ ಟ್ರಸ್ಟ್ ಗೌರವ ಅಧ್ಯಕ್ಷರಾದ ಕೆಂಪನಾಯಕ, ಉದ್ಯಮಿ ಆರ್.ಸರ್ವೇಶ್, ಪತ್ರಕರ್ತರಾದ ಪಿ.ದೇವರಾಜು ಅವರಿಗೆ ವಾಲ್ಮೀಕಿ ಸೇವಾ ರತ್ನ ಪ್ರಶಸ್ತಿ ಮತ್ತು ವಿವಿಧ ಕ್ಷೇತ್ರಗಳಲ್ಲಿ ಗಣನೀಯ ಸೇವೆ ಸಲ್ಲಿಸಿರುವ ಭೂ ಮಾಪನ ಇಲಾಖೆ ಸಹಾಯಕ ನಿರ್ದೇಶಕರಾದ ಚಿಕ್ಕಣ್ಣ, ವಲಯ ಅರಣ್ಯಾಧಿಕಾರಿ ಸಿದ್ದರಾಜು, ಪತ್ರಕರ್ತರಾದ ಕೆ.ಬಿ.ರಮೇಶ್‌ನಾಯಕ, ಕವಯಿತ್ರಿ ರತ್ನ ಚಂದ್ರಶೇಖರ್, ನಾಟಿ ವೈದ್ಯರಾದ ಕಾಳ ಸಿದ್ದನಾಯಕ, ಪಿಹೆಚ್.ಡಿ.ಪದವೀಧರರಾದ ಡಾ.ಸ್ವಾಮಿನಾಯಕ ಬಿ.ವಿ., ಡಾ.ಕಳಲೆ ಮಹೇಶ್, ಡಾ.ಶಶಿಕುಮಾರ್, ಡಾ.ರಂಗಸ್ವಾಮಿ, ಡಾ.ಭವ್ಯ ಅವರನ್ನು ಸನ್ಮಾನಿಸಲಾಯಿತು.
ಕಾರ್ಯಕ್ರಮದಲ್ಲಿ ಕರ್ನಾಟಕ ರಾಜ್ಯ ನಾಯಕ ಜನಾಂಗದ ಹಿತ ರಕ್ಷಣಾ ವೇದಿಕೆ ಗೌರವಾಧ್ಯಕ್ಷರಾದ ದ್ಯಾವಪ್ಪನಾಯಕ ಸಮಾರಂಭದ ಅಧ್ಯಕ್ಷತೆ ವಹಿಸಿದ್ದರು. ರಾಜ್ಯಾಧ್ಯಕ್ಷರಾದ ಎಸ್.ಶ್ರೀಧರ್ ಚಾಮುಂಡಿಬೆಟ್ಟ, ಕಾರ್ಯಾಧ್ಯಕ್ಷರಾದ ಪ್ರಭಾಕರ ಹುಣಸೂರು ಅವರು ಪ್ರಶಸ್ತಿ ಪ್ರದಾನ ಮಾಡಿದರು.
ಕಾರ್ಯಕ್ರಮದಲ್ಲಿ ವೈದ್ಯಾಧಿಕಾರಿ ಡಾ.ಸೋಮಣ್ಣ, ಪಿಡಿಓ ಶಿವಕುಮಾರ್, ಜಿ.ಡಿ.ಸ್ವಾಮಿ, ವಿನೋದ್ ನಾಗವಾಲ, ಡಿ.ವೆಂಕಟೇಶ್ ನಾಯಕ, ಕೆರೆಹಟ್ಟಿ ಮಾದೇಶ್, ಕುಪ್ಪರಳ್ಳಿ ಮೂರ್ತಿ, ರವಿಕುಮಾರ್, ಸುಬ್ರಹ್ಮಣ್ಯ ಎಸ್., ಸುರೇಶ್ ಕುಮಾರ್ ಬೀಡು, ರಾಜು ಮಾರ್ಕೆಟ್, ಎಲ್.ಮಂಜುನಾಥ್, ರವಿ ನಾಯಕ, ಕೆ,.ಎಸ್.ಗಣೇಶ್, ಎಸ್.ಜಿ.ಶಿವಸ್ವಾಮಿ, ಆರ್.ರಂಗಸ್ವಾಮಿ, ಜಿ.ಡಿ.ಪುಟ್ಟರಾಜು ಮುಂತಾದವರು ಇದ್ದರು.
ಶ್ರೀ ಮಹರ್ಷಿ ವಾಲ್ಮೀಕಿ ಅವರು ತಮ್ಮ ರಾಮಾಯಣ ಕೃತಿಯಲ್ಲಿ ಚಿತ್ರಿಸಿರುವ ಶ್ರೀರಾಮ, ಸೀತೆ, ಲಕ್ಷ್ಮಣ, ರಾವಣ ಮುಂತಾದ ಪಾತ್ರಗಳನ್ನು ಇಡೀ ದೇಶವೇ ಪೂಜಿಸುತ್ತಿದೆ. ಆದರೇ, ಈ ಪಾತ್ರಗಳನ್ನು ಬರೆದ ವಾಲ್ಮೀಕಿಯವರನ್ನು ನಾಯಕ ಜನಾಂಗ ಮಾತ್ರ ಸ್ಮರಿಸುತ್ತಿರುವುದು ವಿಪರ್ಯಾಸ. ವಾಲ್ಮೀಕಿಯವರನ್ನು ದೇಶವೇ ಸ್ಮರಿಸುವಂತಾಗಬೇಕು.
ಕೆಂಪನಾಯಕ, ಸಮಾಜ ಸೇವಕರು
ಕರ್ನಾಟಕ ರಾಜ್ಯ ನಾಯಕ ಜನಾಂಗದ ಹಿತರಕ್ಷಣಾ ವೇದಿಕೆಯಿಂದ ವಿವಿಧ ಕ್ಷೇತ್ರದಲ್ಲಿ ಸಾಧನೆ ಮಾಡಿದ ಸಾಧಕರನ್ನು ಗುರುತಿಸಿ ಅವರಿಗೆ
ವಾಲ್ಮೀಕಿ ಸೇವಾ ರತ್ನ ಪ್ರಶಸ್ತಿ ನೀಡುವ ಮೂಲಕ ಸಾಧಕರನ್ನು ಗೌರವಿಸಲಾಗಿದೆ ಮತ್ತು ಅವರು ತಮ್ಮ ಸೇವೆಯಲ್ಲಿ ಮತ್ತಷ್ಟು ಸಾಧನೆ ಮಾಡಲು ಪ್ರೇರೇಪಿಸಿದ್ದೇವೆ.
ದ್ಯಾವಪ್ಪ ನಾಯಕ, ಗೌರವಾಧ್ಯಕ್ಷರು
ಸಮಾಜದ ಹಲವು ಸಾಧಕರನ್ನು ಗುರುತಿಸಿ ಗೌರವಿಸಲಾಗಿದೆ. ಇದರಲ್ಲಿ ಸರ್ಕಾರಿ ನೌಕರರು, ಪಿಹೆಚ್.ಡಿ. ಪದವೀಧರರೂ ಇದ್ದಾರೆ. ಶಿಕ್ಷಣಕ್ಕೆ ಹೆಚ್ಚು ಪ್ರಾಧಾನ್ಯತೆ ನೀಡುವುದು ಮತ್ತು ಅದರ ಮೂಲಕ ಸಂಘಟನೆಯನ್ನು ಬೆಳೆಸುವುದು ನಮ್ಮ ಉದ್ದೇಶವಾಗಿದೆ.
ಎಂ.ರಾಮಚಂದ್ರು, ಜಿಪಂ ಮಾಜಿ ಅಧ್ಯಕ್ಷರು





