ಮೈಸೂರು ಜಿಲ್ಲಾ ವೀರ ಮಡಿವಾಳ ಸಂಘದ ಅಧ್ಯಕ್ಷರಾದ ಸತ್ಯನಾರಾಯಣ ಅವರಿಗೆ ನಂಜನಗೂಡು ತಾಲ್ಲೋಕು ಮಡಿವಾಳರ ಸಂಘದ ವತಿಯಿಂದ ಆತ್ಮೀಯವಾದ ಸನ್ಮಾನ


 ವರದಿ: ನಿಷ್ಕಲ ಎಸ್.ಗೌಡ, ಮೈಸೂರು

ಮೈಸೂರು : ಮೈಸೂರು ಜಿಲ್ಲಾ ವೀರ ಮಡಿವಾಳ ಸಂಘದ ಅಧ್ಯಕ್ಷರಾದ ಸತ್ಯನಾರಾಯಣ ಅವರನ್ನು ನಂಜನಗೂಡು ತಾಲ್ಲೋಕು ಮಡಿವಾಳರ ಸಂಘದ ಅಧ್ಯಕ್ಷರಾದ ಹೆಚ್.ಡಿ.ಪ್ರಸನ್ನಕುಮಾರ್ ಮತ್ತು ಪದಾಧಿಕಾರಿಗಳ ನೇತೃತ್ವದಲ್ಲಿ ಸನ್ಮಾನಿಸಲಾಯಿತು.

ನಂಜನಗೂಡು ಪಟ್ಟಣದಲ್ಲಿರುವ ಮಡಿವಾಳ ಸಮುದಾಯ ಭವನದಲ್ಲಿ ಭಾನುವಾರ ಮದ್ಯಾಹ್ನ ನಡೆದ ಸಮಾರಂಭದಲ್ಲಿ ಸತ್ಯನಾರಾಯಣ ಅವರನ್ನು ಗೌರವಿಸಲಾಯಿತು.

ಭಾನುವಾರ ಸಮುದಾಯದ ಸಂಘಟನೆ ಮತ್ತಿತರ ಕಾರ್ಯನಿಮಿತ್ತ  ನಂಜನಗೂಡು ತಾಲ್ಲೂಕು ಮಡಿವಾಳರ ಸಂಘದ ಕಚೇರಿಗೆ ಆಗಮಿಸಿದ ಮೈಸೂರು ಜಿಲ್ಲಾ ವೀರ ಮಡಿವಾಳ ಸಂಘದ ನೂತನ ಅಧ್ಯಕ್ಷರಾದ ಸತ್ಯನಾರಾಯಣ ಅವರನ್ನು ನಂಜನಗೂಡು ತಾಲ್ಲೂಕು ಮಡಿವಾಳ ಸಂಘದ ಪದಾಧಿಕಾರಿಗಳು ಮತ್ತು ಸದಸ್ಯರು ಆತ್ಮೀಯವಾಗಿ ಬರಮಾಡಿಕೊಂಡು ಸತ್ಯನಾರಾಯಣ ಅವರನ್ನು ಗೌರವಿಸಿದರು.

ಈ ಸಂದರ್ಭದಲ್ಲಿ ಕೆ.ಆರ್.ನಗರ ತಾಲ್ಲೂಕು ಅಧ್ಯಕ್ಷರಾದ ವಕೀಲ ಕುಮಾರ್ ಅವರ ಜತೆಯಲ್ಲಿ ಉಪಾಧ್ಯಕ್ಷರಾಗಿರುವ ಬಿಎಸ್‌ಎನ್‌ಎಲ್

ಬಿಎಸ್‌ಎನ್‌ಎಲ್ ಕೃಷ್ಣ ಅವರು ನಂಜನಗೂಡಿನಲ್ಲಿ ನಡೆದ ಕಾರ್ಯಕ್ರಮದ ವಿಚಾರವನ್ನು ಸಾಮಾಜಿಕ ಮಾಧ್ಯಮಗಳಲ್ಲಿ ಗಮನಿಸಿ, ಸರ್ನ್ಮಾನಕ್ಕೆ ಭಾಜನರಾದ ಜಿಲ್ಲಾ ಅಧ್ಯಕ್ಷರದ ಸತ್ಯನಾರಾಯಣ ಅವರು ಸ್ನೇಹಮಯಿ, ಸಜ್ಜನರು, ಕ್ರಿಯಾಶೀಲ ಸಂಘಟಕರು ಆಗಿದ್ದಾರೆ. ಸಮುದಾಯದ ಬಗ್ಗೆ ಅವರಿಗೆ ಅಪಾರ ಕಾಳಜಿ ಇದೆ. ಮುಂದಿನ ದಿನಗಳಲ್ಲಿ ಮೈಸೂರು ಜಿಲ್ಲಾ ವೀರ ಮಡಿವಾಳರ ಸಂಘಟನೆ ಅತ್ಯುತ್ತಮವಾಗಿ ಅಭಿವೃದ್ಧಿ ಹೊಂದುತ್ತದೆ ಎಂದು ತಮ್ಮ ಮನದಾಳದ ಮಾತನ್ನು ಸಾಮಾಜಿಕ ಮಾಧ್ಯಮದಲ್ಲಿ ವ್ಯಕ್ತಪಡಿಸಿದ್ದಾರೆ.

ಈ ಸಂದರ್ಭದಲ್ಲಿ ನಂಜನಗೂಡು ಟೌನ್ ಯಜಮಾನರಾದ  ಮಹದೇವಣ್ಣ, ಅಧ್ಯಕ್ಷರಾದ ಹೆಜ್ಜಿಗೆ ಹೆಚ್.ಡಿ. ಪ್ರಸನ್ನಕುಮಾರ್, ಗೌರವ ಅಧ್ಯಕ್ಷರಾದ ಶಿವಣ್ಣ, ಪ್ರದಾನ ಕಾರ್ಯದರ್ಶಿಗಳಾದ ಕೆ.ಎಂ. ಬಸವರಾಜ್,  ಖಜಾಂಚಿ ಸೋಮಣ್ಣ, ಉಪಾಧ್ಯಕ್ಷರುಗಳಾದ ಹಗಿನವಳು ರವಿ, ಹೊರಳವಾಡಿ ಮಹೇಶ್, ಸಹ ಕಾರ್ಯದರ್ಶಿ ನಾಗರಾಜ್, ಸಂಘಟನಾ ಕಾರ್ಯದರ್ಶಿ ಘಟ್ಟವಡಿ ಮಹದೇವಸ್ವಾಮಿ, ನಿರ್ದೇಶಕರುಗಳಾದ ಬಸವರಾಜಣ್ಣ, ಪ್ರಭು, ಶಿವಕುಮಾರ, ನಂಜುಂಡಶೆಟ್ಟಿ, ಪ್ರಸಾಂತ್, ತಗಡೂರು ಸುರೇಶ, ಗಣೇಶ್, ಬಸವ, ಸಂಜು, ಬೈರ, ಮಾದು, ರಾಂಪುರ ಮಹೇಶ್ ಮತ್ತಿತರ 

ಮಡಿವಾಳ ಸಮುದಾಯದ ಮುಖಂಡರು ಹಾಜರಿದ್ದರು.