ಶೋಷಿತರ ನೋವುಗಳಿಗೆ ಸ್ಪಂದಿಸುವುದೇ ನಮ್ಮ ಗುರಿ : ದ್ಯಾವಪ್ಪ ನಾಯಕ ನೇತೃತ್ವದಲ್ಲಿ ಯಶಸ್ವಿಯಾಗಿ ಜರುಗಿದ ಅಹಿಂದಾ ಒಕ್ಕೂಟದ ಪ್ರಥಮ ಸಭೆ


 ಮೈಸೂರು : ಸುಮಾರು 24ಕ್ಕೂ ಹೆಚ್ಚು ಹಿಂದುಳಿದ, ದಲಿತ ಮತ್ತು ಅಲ್ಪಸಂಖ್ಯಾತ ಮುಖಂಡರ ಸಮ್ಮುಖದಲ್ಲಿ ನಡೆದ ಕರ್ನಾಟಕ ರಾಜ್ಯ ಅಹಿಂದಾ ಒಕ್ಕೂಟದ ಪ್ರಥಮ ಸಾಮಾನ್ಯ ಸಭೆ ಯಶಸ್ವಿಯಾಗಿ ಜರುಗಿತು.

ರಾಜ್ಯಾಧ್ಯಕ್ಷ ದ್ಯಾವಪ್ಪ ನಾಯಕ ಅವರ ನೇತೃತ್ವದಲ್ಲಿ ಮಂಗಳವಾರ ಬೆಳಗ್ಗೆ ಜಲದರ್ಶಿನಿ ಅತಿಥಿ ಗೃಹದ ಸಭಾಂಗಣದಲ್ಲಿ ನಡೆದ ಸಭೆಯಲ್ಲಿ ಶೋಷಿತ ವರ್ಗದ ಜನರ ನೋವುಗಳಿಗೆ ತಕ್ಷಣ ಸ್ಪಂದಿಸಿ ಅವರಿಗೆ ಸೂಕ್ತ ಸಹಾಯ ಮಾಡುವುದು ನಮ್ಮ ಸಂಘಟನೆಯ ಪ್ರಥಮ ಆದ್ಯತೆಯಾಗಿದೆ ಎಂದು ಎಲ್ಲ ಸಮುದಾಯದ ಮುಖಂಡರು ಒಕ್ಕೂರಲಿನಿಂದ ನಿರ್ಣಯ ಮಂಡಿಸಿ ಸಭೆಯ ಅನುಮೋದನೆ ಪಡೆದರು.

ಈ ಸಂದರ್ಭದಲ್ಲಿ ಸಂಘಟನೆಯ ಅಧ್ಯಕ್ಷರಾದ ದ್ಯಾವಪ್ಪ ನಾಯಕ ಅವರು ಮಾತನಾಡಿ, ನಮ್ಮ ಸಂಘಟನೆ ಯಾರ ಪರವೂ ಇಲ್ಲ. ಅಥವಾ ಯಾರ ವಿರುದ್ಧವೂ ಅಲ್ಲ. ನಮ್ಮದು ಸರ್ಕಾರದಲ್ಲಿ ನೋಂದಣಿ ಆಗಿರುವ ಮೈಸೂರು ಭಾಗದ ಮೊದಲ ಅಹಿಂದಾ ಸಂಘಟನೆ ಆಗಿದೆ. ಅಹಿಂದಾ ಸಮುದಾಯವನ್ನು ಸಂಘಟಿಸುವುದು ಮತ್ತು ನೊಂದವರ ಪರವಾಗಿ ಒಗ್ಗೂಡಿ ಕೆಲಸ ಮಾಡುವುದು ನಮ್ಮ ಸಂಘಟನೆಯ ಉದ್ಧೇಶವಾಗಿದೆ. ಈ ಸಂಘಟನೆ ಕಟ್ಟಲು ನಾವು ಸುಮಾರು 6 ತಿಂಗಳಿನಿಂದ ಶ್ರಮ ಹಾಕಿದ್ದೇವೆ. ತುಳಿತಕ್ಕೆ ಒಳಗಾದ, ಅಧಿಕಾರದಿಂದ ವಂಚಿತರಾದ ಎಲ್ಲ ಸಮುದಾಯಕ್ಕೂ ನಾವು ಸಮಿತಿಯಲ್ಲಿ ಆದ್ಯತೆ ನೀಡಿದ್ದೇವೆ. ನಮ್ಮ ಸಂಘಟನೆ ಯಾವುದೇ ರಾಜಕೀಯ ಪಕ್ಷದ ಪರವಾಗಿಯೂ ಇಲ್ಲ, ವಿರುದ್ಧವಾಗಿಯೂ ಇಲ್ಲ. ನಮ್ಮ ಸಮುದಾಯಗಳಿಗೆ ಅಗತ್ಯವಾದ ಸೌಲಭ್ಯಗಳನ್ನು ದೊರಕಿಸಿಕೊಳ್ಳುವುದು ನಮ್ಮ ಮಕ್ಕಳಿಗೆ ಶಿಕ್ಷಣ, ಉದ್ಯೋಗ ಸೇರಿದಂತೆ ಸರ್ಕಾರದ ಸೌಲಭ್ಯಗಳನ್ನು ದೊರಕಿಸಿಕೊಟ್ಟು ಅವರನ್ನು ಸಾಮಾಜಿಕವಾಗಿ, ಶೈಕ್ಷಣಿಕವಾಗಿ ಮತ್ತು ಆರ್ಥಿಕವಾಗಿ ಅಭಿವೃದ್ಧಿಯಾಗಲಿ ಅಗತ್ಯವಾದ ಮಾರ್ಗದರ್ಶನ, ಸಲಹೆ, ಸಹಕಾರ ನೀಡುವ ಉದ್ದೇಶವನ್ನು ಹೊಂದಿದ್ದೇವೆ. ಶೀಘ್ರದಲ್ಲೇ ಕಚೇರಿ ಮಾಡಲಾಗುವುದು ಎಂದು ದ್ಯಾವಪ್ಪ ನಾಯಕ ಹೇಳಿದರು.

ಈ ಸಂದರ್ಭದಲ್ಲಿ ರಾಜ್ಯಾಧ್ಯಕ್ಷರಾದ ದ್ಯಾವಪ್ಪ ನಾಯಕ, ರಾಜ್ಯ ಪ್ರಧಾನ ಕಾರ್ಯದರ್ಶಿ ಸತ್ಯನಾರಾಯಣ, ರಾಜ್ಯ ಖಜಾಂಚಿ ಬಿ.ಜಿ.ಕೇಶವ, ಗೌರವಾಧ್ಯಕ್ಷರಾದ ಎನ್.ಆರ್.ನಾಗೇಶ್, ಉಪಾಧ್ಯಕ್ಷರಾದ ಎಸ್.ನಾಗರಾಜು, ಸಂಘಟನೆಯ ಕಾಯಾಧ್ಯಕ್ಷರಾದ ಎನ್.ಸಿ.ಉಮೇಶ್, ನಾಗರಾಜು, ಕಾನೂನು ಸಲಹೆಗಾರರಾದ ರವಿಚಂದ್ರ, ಉಪಾಧ್ಯಕ್ಷರಾದ ರಾಜೇಶ್, ಹೆಚ್.ಜಿ.ರೇವಣ್ಣ, ಗೌರವ ಸಲಹೆಗಾರರಾದ ಎಸ್.ಶಂಕರ್, ಸಿ.ಟಿ.ಆಚಾರ್ಯ, ಉಪಾಧ್ಯಕ್ಷರಾದ ಸಿದ್ದಪ್ಪಾಜಿ, ವಿ.ಪಿ.ಸುಶೀಲ, ಡಿ.ಎನ್.ಬಾಬು, ಡಾ. ಪಿ.ಶಾಂತರಾಜೇ ಅರಸ್, ಸಹ ಕಾರ್ಯದರ್ಶಿಗಳಾದ ಆರ್.ಕೆ.ರವಿ, ಕಾಂತರಾಜು, ಸಂಘಟನಾ ಕಾರ್ಯದರ್ಶಿ ಜೆ.ಕೃಷ್ಣ, ರವಿ ಕುಮಾರ್ ಜೆ., ಮಾಧ್ಯವ ವಕ್ತಾರರಾದ ಎಸ್.ಮಂಜುನಾಥ್, ಗೌರವ ಸಲಹೆಗಾರರಾದ ಎಂ.ವಿ.ಶ್ರೀನಿವಾಸ ಮಿತ್ರ, ಸಂಘಟನಾ ಕಾರ್ಯದರ್ಶಿ ಶ್ರೀಧರ ಸಿ., ಸಾಮಾಜಿಕ ಜಾಲತಾಣ ಉಸ್ತುವಾರಿ ಸಂತೋಷ್ ಬಿ., ಮಹೇಶ್ ಸಿ.ಎಸ್., ಸಂಚಾಲಕರಾದ ಸುಂದರ್ ಡಿಸೋಝಾ, ಆರ್.ಆರ್.ಪ್ರಕಾಶ್, ಸಂತೋಷ್ ಕಿರಾಳು, ಲಕ್ಷ್ಮಿ, ಜಯಲಕ್ಷ್ಮಿ, ರಾಜಶೇಖರ್, ನಂಜುಡ ಸ್ವಾಮಿ, ಕೃಷ್ಣ, ಶ್ರೀಧರ, ಭಾಗ್ಯಮ್ಮ, ಮಂಜುನಾಥ್, ನವೀನ್ ಕುಮಾರ್, ಶ್ರೀರಾಮ, ಸತೀಶ್, ಸಂಘಟನಾ ಅಧ್ಯಕ್ಷರಾದ  ರವಿಕುಮಾರ್ ಮುಂತಾದವರು ಇದ್ದರು.  


ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು