ವರದಿ: ನಜೀರ್ ಅಹಮದ್(9740738219)
ಮೈಸೂರು : ರೋಟರಿ ಕ್ಲಬ್ ಆಫ್ ಮೈಸೂರು ಸೌತ್ ಈಸ್ಟ್ ವತಿಯಿಂದ ಜಯನಗರದ ಸರ್ಕಾರಿ ಪ್ರಾಥಮಿಕ ಶಾಲೆಯಲ್ಲಿ 3 ಲಕ್ಷ ರೂ ವೆಚ್ಚದಲ್ಲಿ ನಿರ್ಮಿಸಿರುವ ನೂತನ ವೇದಿಕೆಯನ್ನು ಡಿಸ್ಟ್ರಿಕ್ ಗವರ್ನರ್ ರೊಟೇರಿಯನ್ ವಿಕ್ರಂದತ್ತ ಉದ್ಘಾಟಿಸಿದರು.
ಶುಕ್ರವಾರ ಬೆಳಗ್ಗೆ ಶಾಲಾ ಆವರಣದಲ್ಲಿ ನಿರ್ಮಿಸಿರುವ ನೂತನ ವೇದಿಕೆಯನ್ನು ಲೋಕಾರ್ಪಣೆಗೊಳಿಸಿ ಅವರು ಮಾತನಾಡಿ, ರೋಟರಿ ಕ್ಲಬ್ ಆಫ್ ಮೈಸೂರು ಸೌತ್ ಈಸ್ಟ್‍ನಲ್ಲಿ ಇದುವರೆಗೂ ಅಧ್ಯಕ್ಷರಾಗಿದ್ದ ಎಲ್ಲರೂ ಉತ್ತಮ ಸಮಾಜಮುಖಿ ಕೆಲಸಗಳನ್ನು ಮಾಡಿ ಗಮನಸೆಳೆದಿದ್ದಾರೆ. ಅದೇ ರೀತಿ ರೊಟೇರಿಯನ್ ಕೆ.ಎ.ಗೋವರ್ಧನ್ ಯಾದವ್ ಅವರೂ ಸಜ ಜಯನಗರ ಸರ್ಕಾರಿ ಶಾಲೆಗೆ ಅಗತ್ಯವಾಗಿ ಬೇಕಾದ ವೇದಿಕೆಯನ್ನು 3 ಲಕ್ಷ ರೂ ವೆಚ್ಚದಲ್ಲಿ ನಿರ್ಮಿಸಿಕೊಟ್ಟಿರುವುದು ಶ್ಲಾಘನೀಯ. ಈ ವೇದಿಕೆಯಲ್ಲಿ ಮಕ್ಕಳು ಯಾವುದೇ ಸಭೆ ಸಮಾರಂಭ, ಸಾಂಸ್ಕøತಿಕ ಚಟುವಟಿಕೆಗಳನ್ನು ನಡೆಸಬಹುದು. ಪಠ್ಯ, ಕ್ರೀಡೆ ಮತ್ತು ಸಾಂಸ್ಕøತಿಕ ಚಟುವಟಿಕೆಗಳ ಮೂಲಕ ಮಕ್ಕಳ ಪ್ರತಿಭೆ ಅನಾವರಣವಾಗುತ್ತದೆ. ಮಕ್ಕಳ ಪ್ರತಿಭೆ ಅನಾವರಣಕ್ಕೆ ಈ ವೇದಿಕೆ ಸಹಾಯ ಮಾಡುತ್ತದೆ. ಇಂತಹ ಶಾಶ್ವತ ಉಪಯೋಗಿ ಕಾರ್ಯಕ್ರಮಗಳನ್ನು ನಮ್ಮ ಸಂಸ್ಥೆ ಮಾಡುತ್ತಿದೆ ಈ ಚಟುವಟಿಕೆ ಕಾರ್ಯದಲ್ಲಿ ಕೈ ಜೋಡಿಸಿದ ಎಲ್ಲರೂ ಅಭಿನಂದನಾರ್ಹರು ಎಂದರು. ಕಳೆದ ಮಾರ್ಚ್‍ನಲ್ಲಿ ಇದೇ ವೇದಿಕೆ ಕಟ್ಟಡಕ್ಕೆ ನಾನೇ ಗುದ್ದಲಿಪೂಜೆ ನೆರವೇರಿಸಿದ್ದೆ ಮೂರು ತಿಂಗಳ ಬಳಿಕ ನಾನೇ ಇದನ್ನು ಉದ್ಘಾಟಿಸುತ್ತಿರುವುದು ಸಂತಸ ತಂದಿದೆ. ಮಕ್ಕಳು ತಾವು ಸರ್ಕಾರಿ ಶಾಲೆಯಲ್ಲಿ ಕಲಿಯುತ್ತಿದ್ದೇವೆ ಎಂಬ ಕೀಳರಿಮೆ ಬಿಟ್ಟು ಉತ್ತಮವಾಗಿ ಕಲಿತು ನಿಮ್ಮ ಶಾಲೆಗೆ ನಾಡಿಗೆ ಪೋಷಕರಿಗೆ ಗೌರವ ತರುವ ಕೆಲಸ ಮಾಡಬೇಕು ಎಂದರು.
ಕ್ಷೇತ್ರ ಶಿಕ್ಷಣಾಧಿಕಾರಿ ಸಿ.ಎನ್.ರಾಜು ಅವರು ಮಾತನಾಡಿ, ಸರ್ಕಾರಿ ಶಾಲೆಗಳಲ್ಲಿ ಮಕ್ಕಳ ದಾಖಲಾತಿ ಹೆಚ್ಚಿಸಲು ರಾಜ್ಯ ಸರ್ಕಾರ ಅನೇಕ ಕಾರ್ಯಕ್ರಮಗಳನ್ನು ರೂಪಿಸಿದೆ. ಮಕ್ಕಳಿಗೆ ಬಿಸಿಯೂಟ, ಬಾಳೆಹಣ್ಣು, ಮೊಟ್ಟೆ, ಉಚಿತ ಸಮವಸ್ತ್ರ, ಉಚಿತ ಪುಸ್ತಕಗಳನ್ನು ನೀಡುವುದರ ಜತೆಗೆ ವಿದ್ಯಾರ್ಥಿ ವೇತವನ್ನು ನೀಡುತ್ತದೆ. ಈ ರೀತಿ ಹಲವಾರು ಕಾರ್ಯಕ್ರಮಗಳು ಸರ್ಕಾರ ಒದಗಿಸುತ್ತಿದೆ. ಇದರ ಜತೆಗೆ ಸಂಘ ಸಂಸ್ಥೆಗಳು ಸಹ ಸರ್ಕಾರಿ ಶಾಲೆಗಳ ಅಭಿವೃದ್ಧಿಗೆ ಸಹಕರಿಸುತ್ತಿರುವುದು ಶ್ಲಾಘನೀಯ ಎಂದರು.
ಕಾರ್ಯಕ್ರಮದಲ್ಲಿ ರೋಟರಿ ಸಂಸ್ಥೆಯ ಪದಾಧಿಕಾರಿಗಳನ್ನು ಶಾಲೆ ವತಿಯಿಂದ ಸನ್ಮಾನಿಸಲಾಯಿತು. ನಂತರ ಮಕ್ಕಳು ಸಾಂಸ್ಕøತಿಕ ಕಾರ್ಯಕ್ರಮ ನಬಡೆಸಿಕೊಟ್ಟರು.
ಈ ಸಂದರ್ಭದಲ್ಲಿ ರೊಟೇರಿಯನ್‍ಗಳಾದ ಎಂ.ರಾಜೀವ್, ಎಂ.ಮೋಹನ್, ಕೆ.ಎ.ಗೋವರ್ಧನ್ ಯಾದವ್, ಆರ್.ರಮೇಶ್‍ರಾವ್ ಸೇರಿದಂತೆ ಶಾಲಾ ಶಿಕ್ಷಕರು ಉಪಸ್ಥಿತರಿದ್ದರು.
ಜಯನಗರ ಸರ್ಕಾರಿ ಪ್ರಾಥಮಿಕ ಶಾಲೆಯಲ್ಲಿ ಮಕ್ಕಳ ಸಾಂಸ್ಕøತಿಕ ಚಟುವಟಿಕೆಗಳು, ಶಾಲಾ ಶೈಕ್ಷಣಿಕ ಕಾರ್ಯಕ್ರಮಗಳನ್ನು ನಡೆಸಲು ಒಂದು ವೇದಿಕೆ ಅಗತ್ಯವಿದೆ ಎಂಬ ಬೇಡಿಕೆ ಬಂದ ಹಿನ್ನಲೆಯಲ್ಲಿ ಸಮಿತಿಯವರೊಂದಿಗೆ ಚರ್ಚಿಸಿ 3 ಲಕ್ಷ ರೂ. ವೆಚ್ಚದಲ್ಲಿ ನಿರ್ಮಿಸಿಕೊಡಲಾಗಿದೆ.
ರೊಟೇರಿಯನ್ ಕೆ.ಎ.ಗೋವರ್ಧನ್,
ಅಧ್ಯಕ್ಷರು ರೋಟರಿ ಕ್ಲಬ್ ಆಫ್ ಮೈಸೂರು ಸೌತ್ ಈಸ್ಟ್
0 ಕಾಮೆಂಟ್‌ಗಳು