ವರದಿ-ನಜೀರ್ ಅಹಮದ್(9740738219)
ಮೈಸೂರು : ಎಸ್‍ಎಸ್‍ಎಲ್‍ಸಿ ಪರೀಕ್ಷೆಯಲ್ಲಿ ಶೇ.95 ಅಂಕಗಳನ್ನು ಪಡೆದಿರುವ ರಾಜೇಂದ್ರನಗರದ ಕರ್ನಾಟಕ ಪಬ್ಲಿಕ್ ಶಾಲೆಯ ಪ್ರತಿಭಾವಂತ ವಿದ್ಯಾರ್ಥಿ ಜೆ.ಜಯಂತ್ ಅವರಿಗೆ ಇದೇ ಶಾಲೆಯ ಶಿಕ್ಷಕಿ ತಾರಾ ವಿಶ್ವೇಶ್ವರ ಹೆಗ್ಗಡೆ ಅವರು ವಿದ್ಯಾರ್ಥಿಯ ಮುಂದಿನ ವಿದ್ಯಾಭ್ಯಾಸಕ್ಕೆ ಅನುಕೂಲವಾಗಲು 10 ಸಾವಿರ ನಗದು ಬಹುಮಾನ ನೀಡಿ ಪ್ರೋತ್ಸಾಹಿಸಿದರು.
ಶಾಲೆಯ ನೂತನ ಕಟ್ಟಡ ನಿರ್ಮಾಣ ಕಾಮಗಾರಿಯ ಭೂಮಿಪೂಜೆಗೆ ಆಗಮಿಸಿದ್ದ ಕ್ಷೇತ್ರದ ಶಾಸಕರಾದ ತನ್ವೀರ್ ಸೇಠ್ ಅವರ ಮೂಲಕ ತಾರಾ ಅವರು ವಿದ್ಯಾರ್ಥಿಗೆ 10 ಸಾವಿರ ನಗದು ಬಹುಮಾನ ಕೊಡಿಸಿದರು.
ಈ ಸಂದರ್ಭದಲ್ಲಿ ಶಾಸಕರಾದ ತನ್ವೀರ್ ಸೇಠ್ ಅವರು ಮಾತನಾಡಿ, ಸರ್ಕಾರಿ ಶಾಲೆಯಲ್ಲಿ ಗುಣಮಟ್ಟದ ಶಿಕ್ಷಣ ನೀಡುತ್ತಿರುವುದಕ್ಕೆ ಈ ಪ್ರತಿಭಾವಂತ ವಿದ್ಯಾರ್ಥಿಯು ಪಡೆದಿರುವ ಅಂಕಗಳೇ ಸಾಕ್ಷಿಯಾಗಿವೆ. ಇದೇ ಶಾಲೆಯ ಶಿಕ್ಷಕಿ ಈತನ ಮುಂದಿನ ವಿದ್ಯಾಭ್ಯಾಸಕ್ಕೆ ಪ್ರೋತ್ಸಾಹ ನೀಡಲು 10 ಸಾವಿರ ಬಹುಮಾನವನ್ನು ನಗದು ರೂಪದಲ್ಲಿ ನೀಡುವ ಮೂಲಕ ಈತನ ಶೈಕ್ಷಣಿಕ ನೆರವಿಗೆ ಮುಂದಾಗಿರುವುದು ಸಹ ಶಿಕ್ಷಕರಲ್ಲಿನ ತಾಯ್ತನಕ್ಕೆ ಸ್ಪಷ್ಟ ಉದಾಹರಣೆಯಾಗಿದೆ. ನಮ್ಮ ಕ್ಷೇತ್ರದಲ್ಲಿ ಇಂತಹ ಬಡ ವಿದ್ಯಾರ್ಥಿಗಳನ್ನು ಗುರುತಿಸಿ ಅವರ ಮುಂದಿನ ಶಿಕ್ಷಣಕ್ಕೆ ಪ್ರೋತ್ಸಾಹ ನೀಡಲಾಗುವುದು ಎಂದರು.
ಶಿಕ್ಷಕಿ ತಾರಾ ವಿಶ್ವೇಶ್ವವರ ಹೆಗ್ಗಡೆ ಮಾತನಾಡಿ, ಜಯಂತ್ ನಮ್ಮ ಶಾಲೆಯ ಪ್ರತಿಭಾವಂತ ವಿದ್ಯಾರ್ಥಿಯಾಗಿದ್ದಾನೆ. ಈತನ ತಂದೆ ಮೃತರಾಗಿದ್ದು, ತಾಯಿ ಕೂಲಿ ಮಾಡಿ ಜೀವನ ನಡೆಸುತ್ತಿದ್ದಾರೆ. ಜಯಂತ್ ಶೈಕ್ಷಣಿಕವಾಗಿ ಸಾಧನೆ ಮಾಡಲು ಇಚ್ಛೆ ವ್ಯಕ್ತಪಡಿಸಿದ್ದು, ಆತನ ಆರ್ಥಿಕ ಪರಿಸ್ಥಿತಿ ಕಷ್ಟದಲ್ಲಿರುವ ಕಾರಣ ನಮ್ಮ ಮಕ್ಕಳನ್ನು ನಾವೇ ಗುರುತಿಸಿ ಪ್ರೋತ್ಸಾಹ ನೀಡಬೇಕಿದೆ. ಈ ನಿಟ್ಟಿನಲ್ಲಿ ಆತನ ಮುಂದಿನ ವಿದ್ಯಾಭ್ಯಾಸಕ್ಕೆ ತಾವೇ ದಾನಿಗಳನ್ನು ಹುಡುಕಿಕೊಡುವುದಾಗಿ ಭರವಸೆ ನೀಡಿದರು.
ಈ ಸಂದರ್ಭದಲ್ಲಿ ಮೈಸೂರು ಮಹಾನಗರಪಾಲಿಕೆ ಮಾಜಿ ಸದಸ್ಯ ಪ್ರದೀಪ್ ಚಂದ್ರ, ಕೆಪಿಎಸ್ ಶಾಲೆಯ ಸಿಡಿಸಿ ಉಪಾಧ್ಯಕ್ಷರಾದ ಎಂ.ಎನ್.ಮಹದೇವ, ಪ್ರಾಂಶುಪಾಲರಾದ ಎನ್.ಎಂ.ವಿಜಯೇಂದ್ರ ಕುಮಾರ್, ಶಿಕ್ಷಣ ತಜ್ಞರಾದ ನಬೀಜಾನ್ ಅಜೀಜ್ ಸೇಠ್ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾದ ಸೈಯದ್ ಎಕ್ಬಾಲ್, ಉಪಾಧ್ಯಕ್ಷರಾದ ಷಹೆನ್‍ಷಾ, ಪ್ರಧಾನ ಕಾರ್ಯದರ್ಶಿ ಅಫ್ರೋಜ್, ಕೆಪಿಸಿಸಿ ಸಂಯೋಜಕಾರ ಶೌಕತ್ ಅಲೀಖಾನ್, ಬೀದಿಬದಿ ವ್ಯಾಪಾರಿಗಳ ವಿಭಾಗದ ಅಧ್ಯಕ್ಷರಾದ ಎಂ.ರಸೂಲ್, ಕಾರ್ಮಿಕ ವಿಭಾಗದ ಅಧ್ಯಕ್ಷರಾದ ಮೊಹಮ್ಮದ್ ಶಿಫ್ಟನ್,
ಅಜೀಜ್ ಸೇಠ್ ಬ್ಲಾಕ್ ಪ್ರಧಾನ ಕಾರ್ಯದರ್ಶಿ ವಸೀಂ, ಇಲಿಯಾಸ್ ಬಾಬು ಕೆಸರೆ, ನವಾಜ್, ವಿನೋದ್ ಕುಮಾರ್, ದೀಪಕ್ ಶಿವಣ್ಣ ಮತ್ತಿತರರು ಇದ್ದರು.
0 ಕಾಮೆಂಟ್‌ಗಳು