ಮೈಸೂರು : ಚಿತ್ರನಟ ಜಯಪ್ರಕಾಶ್(ಜೆಪಿ) ಅಭಿನಯದ ಭಗೀರಥ ಕನ್ನಡ ಚಲನಚಿತ್ರ 75ನೇ ದಿನಕ್ಕೆ ಕಾಲಿಟ್ಟ ಹಿನ್ನಲೆ ಜೆಪಿ ಅಭಿಮಾನಿಗಳು ಭಾನುವಾರ ಸ್ಟಾರ್ ಮೆರವಣಿಗೆ ನಡೆಸಿ ಚಿತ್ರ ಮಂದಿರದ ಎದುರು ಪ್ರೇಕ್ಷಕರಿಗೆ ಸಿಹಿ ಹಂಚಿ ಸಂಭ್ರಮಿಸಿದರು.
ಸಾಹಸ ಸಿಂಹ ದಿ.ವಿಷ್ಣುವರ್ಧನ್ ಅಭಿಮಾನಿಗಳ ಸಂಘದ ಮಹದೇವ ಮತ್ತು ಪ್ರದೀಪ್ ನೇತೃತ್ವದಲ್ಲಿ ಹುಣಸೂರು ರಸ್ತೆ ಬೆಳವಾಡಿಯಿಂದ ಸುಮಾರು 50 ಆಟೋಗಳ ಮೂಲಕ ಭಗೀರಥ ಚಲನಚಿತ್ರದ ಸ್ಟಾರ್ಗಳನ್ನು ಮೆರವಣಿಗೆ ನಡೆಸಿದ ಅಭಿಮಾನಿಗಳು, ಬೆಳವಾಡಿ, ಇಲವಾಲ, ಹಿನಕಲ್, ಐಶ್ವರ್ಯ ಪೆಟ್ರೋಲ್ ಬಂಕ್, ಕಲಾ ಮಂದಿರ, ಮೆಟ್ರೋಪೋಟ್ ವೃತ್ತ, ರಾಮಸ್ವಾಮಿ ವೃತ್ತ, ಹಾರ್ಡಿಂಜ್ ವೃತ್ತದ ಮೂಲಕ ಅರಮನೆ ಕೋಟೆ ಆಂಜನೇಯ ಸ್ವಾಮಿ ದೇವಸ್ಥಾನದ ಬಳಿ ಜಮಾಯಿಸಿ ಅಲ್ಲಿ ಭಗೀರಥ ಚಲನಚಿತ್ರ ಶತದಿನ ಪೂರೈಸಲು ಪೂಜೆ ಸಲ್ಲಿಸಿ ನಂತರ ಅಲ್ಲಿಂದ ಮೆರವಣಿಗೆ ಮೂಲಕ ಪ್ರಭಾ ಚಿತ್ರಮಂದಿರ ಬಳಿ ಸೇರಿ ಚಿತ್ರ ವೀಕ್ಷಿಸಲು ಆಗನಮಿಸಿದ್ದ ನೂರಾರು ಪ್ರೇಕ್ಷಕರಿಗೆ ಸಿಹಿ ಹಂಚಿ ಸಂಭ್ರಮಿಸಿದರು.
ಈ ಸಂದರ್ಭದಲ್ಲಿ ಚಿತ್ರಮಂದಿರಕ್ಕೆ ಆಗಮಿಸಿದ ಭಗೀರಥ ಚಲನಚಿತ್ರದ ನಾಯಕ ನಟ ಜಯಪ್ರಕಾಶ್, ಸಹ ನಟಿ ಫಲಕ್, ನಿರ್ಮಾಪಕ ಚೇತನ್ ರಮೇಶ್ ಅವರನ್ನು ಜೆಪಿ ಮತ್ತು ಡಾ.ವಿಷ್ಣುವರ್ಧನ್ ಅಭಿಮಾನಿಗಳು ಅದ್ದೂರಿಯಾಗಿ ಸ್ವಾಗತಿಸಿದರು.
· ಅಭಿಮಾನಿಗಳಿಂದ ಸಿಹಿ ಹಂಚಿ ಸಂಭ್ರಮ
ಈ ಸಂದರ್ಭದಲ್ಲಿ ಚಿತ್ರದ ಸಹ ನಟಿ ಫಲಕ್ ಮಾತನಾಡಿ, ಜೆಪಿ ಸರ್ ಅಭಿನಯದ ಅತ್ಯುತ್ತಮ ಕಥಾ ಹಂದರವುಳ್ಳ ಭಗೀರಥ ಕನ್ನಡ ಚಿತ್ರ 75ನೇ ದಿನಕ್ಕೆ ಕಾಲಿಟ್ಟಿರುವುದು ಸಂತಸದ ವಿಷಯ. ಈ ಸಂದರ್ಭದಲ್ಲಿ ನಾನೂ ಕೂಡ ಈ ಚಿತ್ರದಲ್ಲಿ ನಟಿಸಿರುವ ಕಾರಣ ನನಗೂ ಹೆಮ್ಮೆಯಾಗಿದೆ. ಚಿತ್ರ ನೂರು ದಿನ ಪೂರೈಸುತ್ತದೆ ಎಂಬ ಭರವಸೆ ಇದ್ದು, ಈ ಚಿತ್ರದ ಯಶಸ್ಸಿನ ಮೂಲಕ ಜೆಪಿ ಸರ್ ಅವರಿಗೆ ಸಾಕಷ್ಟು ಅವಕಾಶಗಳು ದೊರೆಯುತ್ತಿವೆ. ಇದು ಹೆಮ್ಮೆಯ ವಿಷಯ ಎಂದರು.
ಪ್ರಭಾ ಚಿತ್ರ ಮಂದಿರದ ವ್ಯವಸ್ಥಾಪಕರು ಮಾತನಾಡಿ, ಕನ್ನಡ ಚಿತ್ರಗಳು ಯಶಸ್ವಿಯಾಗಲು ನಮ್ಮ ಪ್ರೇಕ್ಷಕರ ಸಹಕಾರ ಮುಖ್ಯವಾಗಿದೆ. ಈ ನಿಟ್ಟಿನಲ್ಲಿ ಭಗೀರಥ ಚಿತ್ರ ಯಶಸ್ವಿಯಾಗಲಿ ಶತದಿನದತ್ತ ಮುನ್ನುಗ್ಗುತ್ತಿರುವುದು ಅತ್ಯಂತ ಸಂತೋಷದ ವಿಷಯ ಎಂದರು.
ವಿಷ್ಣುವರ್ಧನ್ ಅಭಿಮಾನಿಗಳ ಸಂಘದ ಮಹದೇವ ಮಾತನಾಡಿ, ಕಾವೇರಿ ಕ್ರಿಯಾ ಸಮಿತಿ ಹೋರಾಟಗಾರರೂ ಕನ್ನಡ ಚಲನಚಿತ್ರದ ನಾಯಕ ನಟರೂ ಆದ ಜಯಪ್ರಕಾಶ್ ಅವರು ಅಭಿನಯಿಸಿರುವ ಭಗೀರಥ ಚಿತ್ರವು 75 ದಿನಗಳನ್ನು ಪೂರೈಸಿ ಇದೀಗ ನೂರನೇ ದಿನದತ್ತ ಕಾಲಿಟ್ಟಿದೆ. ಉತ್ತಮ ಕತೆ, ಅತ್ಯುತ್ತಮ ಅಭಿನಯದ ಕಾರಣದಿಂದ ಚಿತ್ರವು ಯಶಸ್ವಿಯಾಗಿದೆ. ಈ ಚಿತ್ರವು ನೂರು ದಿನ ಪೂರೈಸಲಿ ಎಂದರು.
ಇದೇ ಸಂದರ್ಭದಲ್ಲಿ ಚಲನ ಚಿತ್ರವನ್ನು ವೀಕ್ಷಿಸಲು ಬಂದ ನೂರಾರು ಜನರು ಚಿತ್ರಕ್ಕೆ ಶುಭ ಹಾರೈಕೆ ಮಾಡಿದರು.
0 ಕಾಮೆಂಟ್‌ಗಳು