ಮೈಸೂರು : ನಗರದ ಸರಸ್ವತಿಪುರಂ 7ನೇ ಮುಖ್ಯ ರಸ್ತೆಯಲ್ಲಿ ಶುಕ್ರವಾರ ʼಮೋರ್ ಸೂಪರ್ ಮಾರ್ಕೆಟ್ʼ ಪ್ರಾರಂಭವಾಯಿತು.
ಮೋರ್ ಸೂಪರ್ ಮಾರ್ಕೆಟ್ ಸಂಸ್ಥೆಯ ಮುಖ್ಯಸ್ಥರಾದ ಅಂಕಿತ್ ಆಕಾಶ್ ಅವರು ಟೇಪ್ ಕತ್ತರಿಸಿ ದೀಪ ಬೆಳಗಿಸುವುದರ ಮೂಲಕ ನೂತನ ಮಳಿಗೆಗೆ ಚಾಲನೆ ನೀಡಿದರು.
ನಂತರ ಅವರು ಮಾತನಾಡಿ, ಮೈಸೂರಿನ ಗ್ರಾಹಕರ ಒತ್ತಾಯದ ಮೇರೆಗೆ ಸರಸ್ವತಿ ಪುರಂನ 7ನೇ ಮೇನ್ ಕಾಮಾಕ್ಷಿ ಆಸ್ಪತ್ರೆ ರಸ್ತೆಯಲ್ಲಿ ʼಮೋರ್ ಸೂಪರ್ ಮಾರ್ಕೆಟ್ನ 13ನೇ ಶಾಖೆಯನ್ನು ಪ್ರಾರಂಭಿಸಲಾಗಿದ್ದು, ನಮ್ಮಲ್ಲಿ ಉತ್ಕೃಷ್ಟ ಕಂಪನಿಗಳ ಉತ್ಪನ್ನಗಳನ್ನು ಸ್ಪರ್ಧಾತ್ಮಕ ಬೆಲೆಗಳಲ್ಲಿ ಮಾರಾಟ ಮಾಡಲಾಗುತ್ತದೆ ಎಂದರು.
ಮೈಸೂರು ಬ್ರ್ಯಾಂಚ್ ಮ್ಯಾನೇಜರ್ ಅಯ್ಯಣ್ಣ ಮಾತನಾಡಿ, ಗ್ರಾಹಕರ ಒತ್ತಾಯದ ಮೇರೆಗೆ ಸರಸ್ವತಿಪುರಂನಲ್ಲಿ ನಾವು ನಮ್ಮ 13ನೇ ಬ್ರಾಂಚ್ ಅನ್ನು ಪ್ರಾರಂಭಿಸಿದ್ದೇವೆ. ಉತ್ತಮ ಗುಣಮಟ್ಟದ ಪದಾರ್ಥಗಳನ್ನು ಮಾರಾಟ ಮಾಡಲಾಗುತ್ತದೆ.
ನೂತನ ಮಳಿಗೆ ಪ್ರಾರಂಭದ ಪ್ರಯುಕ್ತ ನಮ್ಮಲ್ಲಿ 3500 ರೂ. ವಸ್ತುಗಳನ್ನು ಖರೀದಿ ಮಾಡಿದರೆ 750 ರೂ ಬೆಲೆಯ ಒಂದು ಕುಕ್ಕರ್ ಉಚಿತವಾಗಿ ನೀಡಲಾಗುತ್ತದೆ. ಹಾಗೆಯೇ 1500 ರೂ ಬೆಲೆಯ ವಸ್ತುಗಳನ್ನು ಖರೀದಿಸಿದರೆ 150 ಬೆಲೆಯ ಪ್ಲಾಸ್ಟಿಕ್ ಕಂಟೈನರ್ ಮತ್ತು 235 ರೂ ಕೊಟ್ಟು ಸದಸ್ಯತ್ವ ಪಡೆದಲ್ಲಿ ಪ್ರತಿಯೊಂದು ಖರೀದಿಗೂ ಶೇ.5 ರಿಯಾಯತಿ ನೀಡಲಾಗುತ್ತದೆ. ಸದಸ್ಯತ್ವ ಪಡೆದವರು ಡ್ರೈಫ್ರೂಟ್ಸ್ ಖರೀದಿ ಮಾಡಿದರೆ 200 ರೂ. ಬೆಲೆ ಕಡಿಮೆ ಮಾಡಲಾಗುವುದು ಎಂದು ಹೇಳಿದರು.
ಈ ಸಂದರ್ಭದಲ್ಲಿ ರೀಜನಲ್ ಹೆಡ್ ಝಮೀರ್ ಪಾಷ, ಸ್ಟೋರ್ ಮ್ಯಾನೇಜರ್ ಅವಿನಾಶ್, ರಾಘವೇಂದ್ರ ಮತ್ತಿತರರು ಉಪಸ್ಥಿತರಿದ್ದರು.
0 ಕಾಮೆಂಟ್‌ಗಳು