ಹನೂರು ತಾಲ್ಲೂಕಿನ ರಾಮಾಪುರ ಗ್ರಾಮದಲ್ಲಿ ಘಟನೆ
ವರದಿ-ಶಾರುಕ್ ಖಾನ್, ಹನೂರು
ಹನೂರು : ವಿದ್ಯುತ್ ಸ್ಪರ್ಷದಿಂದ 2 ಹಸುಗಳು ದಾರುಣವಾಗಿ ಸಾವನ್ನಪ್ಪಿರುವ ಘಟನೆ ತಾಲ್ಲೂಕಿನ ರಾಮಾಪುರ ಗ್ರಾಮದಲ್ಲಿ ನಡೆದಿದೆ.
ಗ್ರಾಮದ ಶಿವಮಣಿ ಎಂಬುವರು ತಮ್ಮ ತೋಟದ ಸಮೀಪದಲ್ಲಿ ಎರಡು ಇಲಾತಿ ಹಸುಗಳನ್ನು ಮೇಯಲು ಬಿಟ್ಟಿದ್ದರು.
ಸಂಜೆಯಾಗುತ್ತಿದ್ದರೂ ಹಸುಗಳು ಮನೆಯತ್ತ ಬಾರದ ಹಿನ್ನೆಲೆಯಲ್ಲಿ ಹುಡು ಕಾಟ ನಡೆಸಿದಾಗ ಹಸುಗಳು ವಿದ್ಯುತ್ ಟ್ರಾನ್ಸ್‍ಫಾರ್ಮರ್ ಕಂಬದ ಸಮೀಪದಲ್ಲಿ ವಿದ್ಯುತ್ ಸ್ಪರ್ಷವಾಗಿ ಮೃತಪಟ್ಟಿದ್ದವು.
ಸುದ್ದಿ ತಿಳಿದು ಸೆಸ್ಕ್ ಎಇಇ ಶಂಕರ್ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿ ವರದಿ ನೀಡುವಂತೆ ತಮ್ಮ ಅಧೀನ ಅಧಿಕಾರಿಗಳಿಗೆ ಸೂಚಿಸಿದರು. ಹಸುಗಳು ಸುಮಾರು 80 ಸಾವಿರ ರೂ. ಬೆಲೆಬಾಳುತ್ತಿದ್ದವು. ಸೆಸ್ಕ್ ನಿರ್ಲಕ್ಷ್ಯದಿಂದ ಹಸುಗಳು ಮೃತಪಟ್ಟುದ್ದು ಕೂಡಲೇ ಪರಿಹಾರ ನೀಡುವಂತೆ ಶಿವಮಣಿ ಒತ್ತಾಯಿಸಿದ್ದಾರೆ.

