ಮೈಸೂರು : ಶ್ರೀ ಶಿವಶರಣ ಮಾದರ ಚೆನ್ನಯ್ಯ ಸೇವಾ ಸಮಿತಿಯಿಂದ ಮೈಸೂರಿನಲ್ಲಿ ಶ್ರೀ ಶಿವಶರಣ ಮಾದಾರ ಚೆನ್ನಯ್ಯ ಅವರ ಜಯಂತೋತ್ಸವ ಕಾರ್ಯಕ್ರಮ ನಡೆಯಿತು. ಇದೇ ವೇಳೆ ಸಮಿತಿ ಅಧ್ಯಕ್ಷರಾದ ತಿಲಕ್‌ನಗರದ ಸ್ವಾಮಿ ಅಧ್ಯಕ್ಷತೆಯಲ್ಲಿ ನಡೆಯಿತು.
ಇದೇ ವೇಳೆ ಜಿಲ್ಲಾ ಪದಾಧಿಕಾರಿಗಳ ಸಭೆಯೂ ಸಹ ನಡೆದು ನೂತನ ಪದಾಧಿಕಾರಿಗಳನ್ನು ಆಯ್ಕೆ ಮಾಡಲಾಯಿತು.
ಈ ಸಂದರ್ಭದಲ್ಲಿ ರಾಜ್ಯ ಕಾರ್ಯದರ್ಶಿ ಡಾ.ಆನಂದ್ ಕುಮಾರ್, ಪ್ರಧಾನ ಕಾರ್ಯದರ್ಶಿ ಮಧುರಾಜ್, ವೆಂಕಟರಾಮ, ಜಿಲ್ಲಾ ಉಪಾಧ್ಯಕ್ಷರುಗಳಾದ ನರಸಿಂಹಮೂರ್ತಿ, ಬಿ.ಎಸ್. ಸುಬ್ರಹ್ಮಣ್ಯ, ಮೂಗೂರು ಸಿದ್ದರಾಜು, ಕಾರ್ಯದರ್ಶಿಗಳಾದ ದೇವು ನಂಜನಗೂಡು, ಮಹದೇವು ಮತ್ತು ಸುಬ್ರಹ್ಮಣ್ಯ ಜ್ಯೋತಿನಗರ, ಕುಮಾರ್ ಪಿರಿಯಾಪಟ್ಟಣ, ಶಿವಣ್ಣ ಹುಳಿಮಾವು, ಮಹಾದೇವ, ಕೆ.ಆರ್. ಕ್ಷೇತ್ರ, ಹರೀಶ್ ಹೆಚ್.ಡಿ. ಕೋಟೆ, ಪ್ರಸನ್ನ ಕುಮಾರ್ ನಂಜನಗೂಡು, ಕೆ.ಆರ್. ನಗರದ ರಾಜೇಶ್ ಮತ್ತು ಮಂಜು, ದುದ್ಗೆರೆ ಅರುಣ್ ಕುಮಾರ್, ಮನು, ಶಿವರಾಜ್ ಹುಣಸೂರು, ರಾಹುಲ್, ಮಾದೇವಯ್ಯ ಮತ್ತು ಇತರೆ ಸಂಘದ ಪದಾಧಿಕಾರಿಗಳು ಭಾಗವಹಿಸಿದ್ದರು.