ವರದಿ : ನಿಷ್ಕಲ ಎಸ್., ಮೈಸೂರು
ಮೈಸೂರು : ನಗರದ ರ್ಯಾಡಿಸನ್ ಬ್ಲೂ ಪ್ಲಾಜಾ ಹೋಟೆಲ್ನಲ್ಲಿ ನವೆಂಬರ್ 25 ಮತ್ತು 26ರಂದು ಬೆಳಗ್ಗೆ
10ರಿಂದ ರಾತ್ರಿ 9 ಗಂಟೆಯವರೆಗೆ ಬಹು ನಿರೀಕ್ಷಿತ ಹೈ ಲೈಫ್ ಎಕ್ಸಿಬಿಷನ್ ನಡೆಯಲಿರುವುದಾಗಿ ಆಯೋಜಕರಾದ ಶೋಮಿಕಾ ಎಸ್. ರಾವ್ ತಿಳಿಸಿದರು.
ಜಿಲ್ಲಾ ಪತ್ರಕರ್ತರ ಭವನದಲ್ಲಿ ಸೋಮವಾರ ಸುದ್ದಿಗೋಷ್ಠಿಯಲ್ಲಿ ಅವರು ಮಾತನಾಡಿ, ಎರಡು ದಿನಗಳ ಈ ಶಾಪಿಂಗ್ ಮಹೋತ್ಸವದಲ್ಲಿ ಭಾರತದ ವಿವಿಧ ಭಾಗಗಳಿಂದ ಬಂದಿರುವ ಅತ್ಯುತ್ತಮ ಉಡುಪುಗಳು, ಆಭರಣಗಳು ಮ ತ್ತು ಫ್ಯಾಷನ್ ಆಕ್ಸೆಸರಿಗಳು ಪ್ರದರ್ಶನಕ್ಕೆ ಬರಲಿವೆ. ಲೆಹೆಂಗಾ, ಸೀರೆ, ಡಿಸೈನರ್ ಗೌನ್ಗಳು ಸೇರಿದಂತೆ ವೈವಿಧ್ಯಮಯ ಆಕರ್ಷಕ ಆಭರಣಗಳ ಸಂಗ್ರಹ ಈ ಪ್ರದರ್ಶನದ ಆಕರ್ಷಣೆಯಾಗಲಿದೆ ಎಂದರು.
``ಹೈ ಲೈಫ್ ಎಕ್ಸ್ ಎಂದರೆ ಸಂಪ್ರದಾಯ ಮತ್ತು ಆಧುನಿಕತೆಯ ಸಂಗಮ. ಮೈಸೂರಿನ ವಧುಗಳ ರುಚಿ-ಭಾವನೆಗಳಿಗೆ ಹೊಂದುವAತೆ ನಾವು ವಿಶೇಷ ಸಂಗ್ರಹವನ್ನು ಸಿದ್ಧಪಡಿಸಿದ್ದೇವೆ.ಸಾಂಸ್ಕöÈತಿ ತಿಕ ಪರಂಪರೆಯುಳ್ಳ ಮೈಸೂರಿನಲ್ಲಿ ಈ ಮಹೋತ್ಸವವನ್ನು ಏರ್ಪಡಿಸುವುದು ನಮಗೆ ಹೆಮ್ಮೆಯ ಸಂಗತಿ,'' ಎಂದು ಶಮಿಕಾ ಹೇಳಿದರು.
ಎಕ್ಸ್ ಪೋ ವೈಶಿಷ್ಟ÷್ಯವನ್ನು ವಿವರಿಸಿದ ಶ್ರೀಕಾಂತ್, "ಹೈ ಲೈಫ್ ಫ್ಯಾಷನ್ ಎಕ್ಸಿಬಿಷನ್ ಭಾರತದ ಪ್ರಮುಖ ಡಿಸೈನರ್ಗಳ ನವೀನ ಡಿಸೈನ್ಗಳು, ಜಾಗತಿಕ ಫ್ಯಾಷನ್ ಟ್ರೆಂಡ್ಗಳು ಮತ್ತು ಸೃಜನಾತ್ಮಕ ಕಲ್ಪನೆಗಳು ಒಂದೇ ವೇದಿಕೆಯಲ್ಲಿ ಒದಗಿಸುವ ಪ್ರಮುಖ ಕಾರ್ಯಕ್ರಮ,'' ಎಂದರು.
ಇದು ಕೇವಲ ಪ್ರದರ್ಶನವಲ್ಲ, ಈ ಎಕ್ಸ್ಪೋ ಸಸ್ಸೇನಬಿಲಿಟಿ, ಒಳಗೊಳ್ಳುವಿಕೆ ಮತ್ತು ಸಾಂಸ್ಕöÈತಿಕ ವೈವಿಧ್ಯತೆಗಳಿಗೆ ಪ್ರಾಮುಖ್ಯತೆ ನೀಡುವ, ಭವಿಷ್ಯದ ಫ್ಯಾಷನ್ಗೆ ದಿಕ್ಕು ತೋರಿಸುವ ವೇದಿಕೆ ಎಂದು
ಅವರು ಅನುಮೋದಿಸಿದರು. ವಿವಾಹ ಮುಂಗಡ ಸೀಸನ್ ಹಿನ್ನೆಲೆಯಲ್ಲಿ ಫ್ಯಾಷನ್ ಪ್ರಿಯರು ಹಾಗೂ ವಿಶಿಷ್ಟ ಉಡುಪಿನ ಆಸಕ್ತರಿಗಾಗಿ ಇದು ಒಳ್ಳೆಯ ಅವಕಾಶ ಎಂದು ಅವರು ಹೇಳಿದರು.

