ರಾಜಕಾರಣದಲ್ಲಿ ಗಣೇಶನ ಕೆಲಸಕ್ಕಿಂತ ಸುಬ್ರಹ್ಮಣ್ಯನ ಕೆಲಸಕ್ಕೆ ಹೆಚ್ಚಿ ಮಹತ್ವ : ಪ್ರದೀಪ್ ಕುಮಾರ್


ವರದಿ: ನಿಷ್ಕಲ ಎಸ್.ಗೌಡ, ಮೈಸೂರು

ಮೈಸೂರು : ರಾಜಕಾರಣದಲ್ಲಿ ಗಣೇಶನ ಕೆಲಸ ನಡೆಯುವುದಿಲ್ಲ, ಸುಬ್ರಹ್ಮಣ್ಯನ ಕೆಲಸ ನಡೆಯುತ್ತದೆ. ಜನರ ಮಧ್ಯೆ ಇದ್ದು ಕೆಲಸ ಮಾಡುವವರು ಜನ ಸೇವಕರಾಗುತ್ತಾರೆ ಇವರಿಗೆ ಅಧಿಕಾರ ಸಿಗುವುದು ತಡವಾಗುತ್ತದೆ, ಆದರೇ ಮುಖಂಡರ ಜತೆ ಇದ್ದು ಕೆಲಸ ಮಾಡುವವರಿಗೆ ಅಧಿಕಾರ ಬೇಗ ಸಿಗುತ್ತದೆ ನಾನು ಆಶಾವಾದಿಯಾಗಿದ್ದೇನೆ ಎಂದು ಕಾಂಗ್ರೆಸ್ ಮುಖಂಡ ಎಂ. ಪ್ರದೀಪ್ ಕುಮಾರ್ ಹೇಳಿದರು. 

ನಗರದ ಕಚೇರಿಯಲ್ಲಿ ಬುಧವಾರ ಅಭಿಮಾನಿಗಳ ಜತೆ ತಮ್ಮ ಹುಟ್ಟುಹಬ್ಬವನ್ನು ಆಚರಿಸಿಕೊಂಡು ಅವರು ಮಾತನಾಡಿದರು.

ಇಂದು ನನ್ನ ಹುಟ್ಟಿದ ಹಬ್ಬ, ಅತ್ಯಮೂಲ್ಯವಾದ ದಿನ, ಸಾಮಾಜಿಕ ಕ್ಷೇತ್ರದಲ್ಲಿ ಸಾಕಷ್ಟು ಕೆಲಸ ಮಾಡುತ್ತಿದ್ದೇನೆ. ನಮ್ಮನ್ನು ಸಮಾಜದಲ್ಲಿ ಇಷ್ಟ ಪಡುವ ಎಲ್ಲರೂ ನನ್ನ ಸಂಬಂಧಿಕರು, ನನಗೆ ಸಾಕಷ್ಟು ಜನ ಆಶೀರ್ವಾದ ಮಾಡಿದ್ದಾರೆ. ಅಧಿಕಾರ ಸಿಕ್ಕಿಲ್ಲ, ನೊಂದಿದ್ದೇನೆ. ಮಧ್ಯಮ ವರ್ಗದವರಿಗೆ ಅಧಿಕಾರ ಸಿಗುವುದು ಕಷ್ಟ, ಸಿಗದೆಯೂ ಇರಬಹುದು, ಆದರೇ ಎದೆ ಗುಂದಬೇಡ ನಿನ್ನ ಜತೆ ನಾವಿದ್ದೇವೆ ಎಂದು ಹಲವು ನನ್ನ ಗೆಳೆಯರು ಹೇಳಿ ಆಶೀರ್ವಾದ ಮಾಡಿದ್ದಾರೆ. ಟಿಕೆಟ್ ಸಿಗದಿರಬಹುದು, ಆದರೇ ಹಸನ್ಮುಖಿಯಾಗಿದ್ದೇನೆ. ನಮ್ಮದೇ ಆದ ಕೆಲವು ಯೋಜನೆಗಳಿವೆ ಅಧಿಕಾರ ಸಿಕ್ಕಿದರೆ ನಾನೇ ಮಾಡುತ್ತೇನೆ. ಸಿಗದಿದ್ದಲ್ಲಿ ಅಧಿಕಾರಕ್ಕೆ ಬಂದವರಿಗೆ ಹೇಳಿ ಮಾಡುತ್ತೇನೆ ಎಂದರು.

ಮುಂದಿನ ಬಾರಿ ನಿಮಗೆ ಪಕ್ಷದ ಟಿಕೆಟ್ ಸಿಗಬಹುದಾ ಎಂಬ ಪ್ರಶ್ನೆಗೆ ಉತ್ತರಿಸಿದ ಅವರು, ಕಳೆದ ಬಾರಿಯೇ ಸಿಗಬೇಕಿತ್ತು, ಆದರೇ, ಪಕ್ಷದಲ್ಲಿ ಹಿರಿತನಕ್ಕೂ ಗೌರವ ಕೊಡಬೇಕಿದೆ. ಮುಂದಿನ ಸಾರಿ ನೋಡೋಣ, ನಾನು ಆಶಾವಾದಿ ಎಂದರು. ಇದೇ ವೇಳೆ ಪ್ರದೀಪ್ ಕುಮಾರ್ ಅವರ ನೂರಾರು ಗೆಳೆಯರು, ಅಭಿಮಾನಿಗಳು ಹುಟ್ಟು ಹಬ್ಬದ ಶುಭ ಕೋರಿದರು.