ಸಹಾಯಕ ಪ್ರಾಧ್ಯಾಪಕರ ಹುದ್ದೆ ಹೆಚ್ಚಳಕ್ಕೆ ಸಿಎಂಗೆ ಶಿಫಾರಸ್ಸು ಮಾಡುವಂತೆ ದೇವರಾಜ ಅರಸು ಪ್ರತಿಮೆ ಪ್ರತಿಷ್ಠಾಪನಾ ಸಮಿತಿಯಿಂದ ವಿಪಕ್ಷ ನಾಯಕ ಸಿದ್ದರಾಮಯ್ಯಗೆ ಮನವಿ
ಅಕ್ಟೋಬರ್ 01, 2022
ಮೈಸೂರು : ಸರ್ಕಾರಿ ಪ್ರಥಮ ದರ್ಜೆ ಸಹಾಯಕ ಪ್ರಾಧ್ಯಾಪಕರ ನೇಮಕಾತಿಯಲ್ಲಿನ ಹುದ್ದೆಗಳ ಸಂಖ್ಯೆ ಹೆಚ್ಚಿಸುವಂತೆ ಮುಖ್ಯಮಂತ್ರಿಗಳಿಗೆ ಶಿಪ್ಫಾರಸ್ಸು ಮಾಡಲು ಕೋರಿ ವಿಪಕ್ಷ ನಾಯಕ ಸಿದ್ದರಾಮಯ್ಯ ಅವರಿಗೆ ದೇವರಾಜ ಅರಸು ಪ್ರತಿಮೆ ಪ್ರತಿμÁ್ಠಪನ ಸಮಿತಿಯ ಅಧ್ಯಕ್ಷ ಜಾಕೀರ್ ಹುಸೇನ್ ಮನವಿ ಸಲ್ಲಿಸಿದರು.
2015-16ರಲ್ಲಿ ಸಿದ್ದರಾಮಯ್ಯ ಮುಖ್ಯಮಂತ್ರಿಯಾಗಿದ್ದ ಸಂದರ್ಭದಲ್ಲಿ ನಡೆದಿದ್ದ ನೇಮಕಾತಿಯಲ್ಲಿ 1298 ಹುದ್ದೆಗಳಿಗೆ ಅರ್ಜಿ ಕರೆಯಲಾಗಿತ್ತಾದರೂ ಹೆಚ್ಚುವರಿಯಾಗಿ 862 ಹುದ್ದೆಗಳನ್ನು ಸೇರಿಸಲಾಗಿತ್ತು. ಅದೇ ರೀತಿ ಈಗ ನಡೆಯುತ್ತಿರುವ 1242 ಹುದ್ದೆಗಳ ನೇಮಕಾತಿಯಲ್ಲಿ ಕನಿಷ್ಠ 700 ರಿಂದ 800 ಹುದ್ದೆಗಳ ಹೆಚ್ಚಳ ಮಾಡಲು ಮುಖ್ಯಮಂತ್ರಿಗಳಿಗೆ ಶಿಪ್ಫಾರಸ್ಸು ಮಾಡುವಂತೆ ಅರ್ಜಿದಾರರು ಸಿದ್ದರಾಮಯ್ಯ ಅವರನ್ನು ಕೋರಿದರು.
ಪ್ರಸ್ತುತ ನೇಮಕಾತಿಯು ಹಲವಾರು ಅಭ್ಯರ್ಥಿಗಳ ಪಾಲಿಗೆ ಕೊನೆಯದಾಗಿದ್ದು, ಇದಕ್ಕೆ ಅವರ ವಯೋಮಿತಿ ಮೀರುತ್ತಿರುವುದು ಕಾರಣವಾಗಿದೆ. ಇದನ್ನು ಸರ್ಕಾರ ಗಂಭೀರವಾಗಿ ಪರಿಗಣಿಸಿ ಹುದ್ದೆಗಳ ಹೆಚ್ಚಳ ಮಾಡಿದರೆ ನೂರಾರು ಅಭ್ಯರ್ಥಿಗಳ ಭವಿಷ್ಯ ಉಜ್ವಲವಾಗುತ್ತದೆ ಎಂದು ಅರ್ಜಿಯಲ್ಲಿ ವಿನಂತಿಸಲಾಗಿದೆ.