ಮಲೆ ಮಹದೇಶ್ವರ ಬೆಟ್ಟದಲ್ಲಿ ಹುಲಿ ಯೋಜನೆ ರದ್ದು ಪಡಿಸುವಂತೆ ಸೋಲಿಗರ ಮುಖಂಡ ದೊಡ್ಡ ಸಿದ್ದಯ್ಯ ಒತ್ತಾಯ

ಸೋಲಿಗರ ಪೋಡುಗಳಲ್ಲಿ ಇಂದಿಗೂ ಶುದ್ಧ ಕುಡಿಯುವ ನೀರು, ಉತ್ತಮ ರಸ್ತೆ, ವಿದ್ಯುತ್ ಇಲ್ಲ : ಆರೋಪ

 ವರದಿ-ಶಾರುಕ್ ಖಾನ್, ಹನೂರು 

ಹನೂರು : ಅರಣ್ಯ ಹಕ್ಕು ಕಾಯ್ದೆಯನ್ನು ಸರ್ಕಾರ ಸಮರ್ಪಕವಾಗಿ ಜಾರಿಗೆ ತರಬೇಕು ಮತ್ತು ಮಲೆ ಮಹದೇಶ್ವರ ಬೆಟ್ಟದಲ್ಲಿ ಹುಲಿ ಯೋಜನೆ ರದ್ದು ಪಡಿಸಬೇಕೆಂದು ಸೋಲಿಗ ಅಭಿವೃದ್ದಿ ಸಂಘದ ನೂತನ ಅಧ್ಯಕ್ಷ ದೊಡ್ಡ ಸಿದ್ದಯ್ಯ ಒತ್ತಾಯಿಸಿದರು.
ಪೊನ್ನಾಚಿಯ ಗೊಟ್ಟಿದಿಂಬ ಫೋಡಿನಲ್ಲಿ ನಡೆದ ಸರ್ಕಲ್ ಸೋಲಿಗ ಅಭಿವೃದ್ದಿ ಸಂಘದ ಸಭೆಯಲ್ಲಿ ಭಾಗವಹಿಸಿ ಅವರು ಮಾತನಾಡಿದರು. ಶಿಕ್ಷಣ, ಆರೋಗ್ಯ, ವಸತಿ ಮುಂತಾದ ಮೂಲ ಸೌಕರ್ಯಗಳ ಕೊರತೆಯಿಂದ ಸೋಲಿಗ ಸಮುದಾಯ ಸಂಕಷ್ಟದಲ್ಲಿದೆ. ಅಧಿಕಾರಿಗಳು ಶೀಘ್ರ ಪರಿಹಾರ ದೊರಕಿಸಲು ಮುಂದಾಗಬೇಕೆಂದು ಅವರು ಒತ್ತಾಯಿಸಿದರು. 
ಸೋಲಿಗರ ಪೋಡುಗಳಲ್ಲಿ ಇಂದಿಗೂ ಶುದ್ಧ ಕುಡಿಯುವ ನೀರು ದೊರಕುತ್ತಿಲ್ಲ. ಉತ್ತಮ ರಸ್ತೆಯಾಗಲೀ, ಸಮರ್ಪಕ ವಿದ್ಯುತ್ ದೊರೆಯುತ್ತಿಲ್ಲ. ಅರಣ್ಯ ಹಕ್ಕು ಕಾಯಿದೆ ಸಮರ್ಪಕವಾಗಿ ಅನುμÁ್ಠನವಾಗುತ್ತಿಲ್ಲ. ಕೂಡಲೇ ಸರ್ಕಾರ ಈ ಬಗ್ಗೆ ಕ್ರಮ ಕೈಗೊಳ್ಳಬೇಕು.
ಜತೆಗೆ ಈ ಕೂಡಲೇ ಮಲೆ ಮಹದೇಶ್ವರ ಸ್ವಾಮಿ ಹುಲಿ ಯೋಜನೆ ರದ್ದು ಪಡಿಸಬೇಕು ಎಂದರು.
2022-23 ನೆ ಸಾಲಿನ ವಿಶೇಷ ಪೌಷ್ಟಿಕ ಆಹಾರ ಯೋಜನೆಯ ಆಹಾರ ಪದಾರ್ಥಗಳು ನಮಗೆ ಸಿಗುತ್ತಿಲ್ಲ. ಇವೆಲ್ಲವನ್ನೂ ದೊರಕಿಸಿಕೊಳ್ಳಲು ಸೋಲಿಗ ಸಮುದಾಯ ಸಂಘಟಿತರಾಗಿ ಒಗ್ಗಟ್ಟಿನಿಂದ ಹೋರಟ ನಡೆಸಬೇಕು ಎಂದು ಕರೆ ನೀಡಿದರು.
ನೂತನ ಕಾರ್ಯದರ್ಶಿ ರಂಗೇಗೌಡ, ಮುನಿರಾಜು. ನಿರ್ದೇಶಕರುಗಳಾದ ಪುಟ್ಟಮಾದ, ಕೇಶವ, ರುದ್ರಮ್ಮ ಮುಖಂಡರುಗಳಾದ ಸಣ್ಣಪ್ಪ, ಹುಚ್ಚಯ್ಯ, ಶ್ರೀಭದ್ರ, ರಾಜು ಇದ್ದರು.