ಆರೋಗ್ಯಯುತ ಬದುಕಿಗೆ ಯೋಗ ತುಂಬಾ ಮುಖ್ಯ- ಸಂಸದ ಪ್ರತಾಪ್ ಸಿಂಹ


 ಮೈಸೂರು : ವಿದ್ಯೆ ಜೀವನಕ್ಕೆ ಎಷ್ಟು ಅಗತ್ಯವೋ ಆರೋಗ್ಯಯುತವಾದ  ಬದುಕಿಗೆ ಯೋಗ ತುಂಬಾ ಮುಖ್ಯವಾದದ್ದು ಎಂದು ಸಂಸದ ಪ್ರತಾಪ್ ಸಿಂಹ ತಿಳಿಸಿದರು.

ವಿಶ್ವವಿಖ್ಯಾತ ನಾಡಹಬ್ಬ ದಸರಾ ಮಹೋತ್ಸವದ ಪ್ರಯುಕ್ತ ಅಂಬಾ ವಿಲಾಸ ಅರಮನೆಯ ಮುಂಭಾಗದಲ್ಲಿ ಯೋಗ ದಸರಾ ಉಪಸಮಿತಿ ಹಮ್ಮಿಕೊಂಡಿದ್ದ ಯೋಗ ಸರಪಳಿ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.

ನಾಡಹಬ್ಬ ದಸರಾದಲ್ಲಿ ಹಮ್ಮಿಕೊಂಡಿರುವ ಯೋಗ ಕಾರ್ಯಕ್ರಮ ಒಂದು ಒಳ್ಳೆಯ ಕಾರ್ಯಕ್ರಮವಾಗಿದೆ. ಇದು ವರ್ಷಪೂರ್ತಿ ನಮ್ಮ ಜೀವನದ ಭಾಗವಾಗಬೇಕು ಎಂದರು. 

ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಜಿಲ್ಲಾ ಆಯುμï ವೈದ್ಯಾಧಿಕಾರಿಗಳಾದ ಡಾ.ಪುಷ್ಪ, ಶ್ರೀಹರಿ, ಯೋಗ ದಸರಾ ಉಪ ಸಮಿತಿಯ ಅಧ್ಯಕ್ಷ ಬಾಲಕೃಷ್ಣ, ವಿರೂಪಾಕ್ಷ ಬೆಳವಾಡಿ, ಕೆ.ವೈ.ಮಂಜು ಇನ್ನಿತರರು ಇದ್ದರು.