ಮೈಸೂರು : ನಾಡಹಬ್ಬ ಮೈಸೂರು ದಸರಾಕ್ಕೆ ಕ್ಷಣಗಣನೆ ಆರಂಭವಾಗಿದ್ದು, ಪ್ರವಾಸಿಗರ ಆಗಮನ ಪ್ರಾರಂಭವಾಗಿದೆ. ನಗರದ ಸ್ವಚ್ಚತೆ ಕಾಪಾಡುವುದರಲ್ಲಿ ನಗರಪಾಲಿಕೆ ಕಾರ್ಯ ಹೆಚ್ಚಾಗಿದ್ದು, ಅರಮನೆಗೂ ವಸ್ತು ಪ್ರದರ್ಶನಕ್ಕೂ ಸಂಪರ್ಕ ಕಲ್ಪಿಸುವ ಅಂಡರ್ ಪಾಸ್ ಸ್ವಚ್ಛತೆ ಕಾಣದೆ ಗಬ್ಬುನಾರುತ್ತಿದ್ದು, ಕೂಡಲೇ ಇದನ್ನು ಗಮನಿಸುವಂತೆ ಸಾಮಾಜಿಕ ಹೋರಾಟಗಾರ ವಿಕ್ರಂ ಅಯ್ಯಂಗಾರ್ ಪಾಲಿಕೆ ಆಯುಕ್ತರಿಗೆ ಆಗ್ರಹಿಸಿದ್ದಾರೆ.
ಸ್ವಚ್ಛತೆ ಇಲ್ಲದ ಕಾರಣ ಇಲ್ಲಿ ಸಾರ್ವಜನಿಕರ ತಿರುಗಾಟ ಇರುವದಿಲ್ಲ. ಇದರಿಂದ ಇದು ಅನೈತಿಕ ತಾಣವಾಗಿಯೂ ಮಾರ್ಪಟ್ಟಿದೆ. ಸರ್ಕಾರ ಸಾರ್ವಜನಿಕರ ಅನುಕೂಲಕ್ಕಾಗಿ ಕೊಟ್ಯಾಂತರ ರೂ. ಖರ್ಚು ಮಾಡಿದ ಅಭಿವೃದ್ಧಿ ಕಾಮಗಾರಿಗಳು ಅಧಿಕಾರಿಗಳ ನಿರ್ಲಕ್ಷ್ಯದಿಂದ ಉಪಯೋಗಕ್ಕೆ ಬಾರದಂತಾಗಿವೆ. ಸಧ್ಯ ಬೀಗ ಹಾಕಿರುವ ಈ ಅಂಡರ್‌ಪಾಸ್ ಕೂಡಲೇ ತೆರವು ಮಾಡಿ ಅದರಲ್ಲಿ ಸ್ವಚ್ಛತೆ ಕಾಪಾಡಿ ಕನಿಷ್ಠ ಅಲ್ಲೊಬ್ಬ ಸೆಕ್ಯೂರಿಟಿ ಗಾರ್ಡ್ ನೇಮಿಸಿ ನಗರದ ಅಂದ ಕಾಪಾಡಬೇಕೆಂದು ಅವರು ಆಗ್ರಹಿಸಿದ್ದಾರೆ.