ಸೇವಾ ಸಿಂಚನ ಟ್ರಸ್ಟ್ ನಿಂದ ಆರೋಗ್ಯ ಜಾಗೃತಿ ಕಾರ್ಯಕ್ರಮ

 ವರದಿ-ವೇಣುಗೋಪಾಲ ಮುದ್ಗುಣಿ
ಸಿರ್ಸಿ : ನಗರದ ಗಾಂಧಿನಗರ ಪದ್ಮಾವತಿ ಸಮಾಜ ಮಂದಿರದಲ್ಲಿ ಸೇವಾ ಸಿಂಚನ ಟ್ರಸ್ಟ್‍ನಿಂದ ಆರೋಗ್ಯ ಜಾಗೃತಿ ಕಾರ್ಯಕ್ರಮ ನಡೆಯಿತು.  ಮುಖ್ಯ ಅಥಿತಿಗಳಾಗಿ ಸರಕಾರಿ ಆಯುರ್ವೇದ ಚಿಕಿತ್ಸಾಲಯದ ವೈದ್ಯಾಧಿಕಾರಿ ಡಾ.ಪೂರ್ಣಿಮಾ ಮಾತನಾಡಿ, ಮಹಿಳೆಯರಲ್ಲಿ ಉಂಟಾಗಬಹುದಾದ ವಯೋಸಹಜ ಬದಲಾವಣೆಗಳು ಆ ಸಮಯದಲ್ಲಿ ಉಂಟಾಗಬಹುದಾದ ಸಮಸ್ಯೆಗಳು ಮತ್ತು ಪರಿಹಾರದ ಕುರಿತು ಮತ್ತು ಇಂದಿನ ಹೆಣ್ಣುಮಕ್ಕಳಲ್ಲಿ ಹೆಚ್ಚಾಗಿ ಕಂಡುಬರುತ್ತಿರುವ ಪಿಸಿಒ ಡಿ ಸಮಸ್ಯೆಗಳ ಬಗ್ಗೆ ಮಾಹಿತಿ ನೀಡಿದರು. ಉತ್ತಮ ಆರೋಗ್ಯವನ್ನು ಕಾಪಾಡಿಕೊಳ್ಳಲು ಅನುಸರಿಸಬೇಕಾದ ಆಹಾರ ಪದ್ಧತಿ, ವಾತ, ಪಿತ್ತ, ಕಫ, ಸಕ್ಕರೆ ಖಾಯಿಲೆ, ಬಿಪಿ ಮೆನೋಪಾಸ್ ಸಮಸ್ಯೆಗಳ ಕುರಿತು ಸುಧೀರ್ಘವಾಗಿ ಮಾಹಿತಿ ನೀಡಿದರು. ಕಾರ್ಯಕ್ರಮದಲ್ಲಿ ಪಾಲ್ಗೊಂಡ ವಿದ್ಯಾರ್ಥಿನಿಯರು ತಮ್ಮ ಸಮಸ್ಯೆಗಳ ಕುರಿತು ಚರ್ಚಿಸಿದರು. ಟ್ರಸ್ಟ್‍ನ ಅಧ್ಯಕ್ಷರಾದ ಸುಮಾ ಉಗ್ರಾಣಕರ ಮಾತನಾಡಿ, ಟ್ರಸ್ಟ್ ನಡೆದು ಬಂದ ದಾರಿ ಕೈಗೊಂಡ ಕಾರ್ಯಕ್ರಮಗಳ ಜೊತೆಗೆ ಸ್ವಾಗತ ಕೋರಿದರು. ನಗರಸಭೆಯ ಮಾಜಿ ಅಧ್ಯಕ್ಷರಾದ ಮೋಹಿನಿ ಬೈಲೂರು ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಶಕುಂತಲಾ ಜೈವಂತ, ಲತಾ ಕೆರೇಕರ್, ವಿನುತಾ ಪಾಟೀಲ್, ವಿಮಲಾ ಅಂಕೊಲೇಕರ, ನ್ಯಾನ್ಸಿ ನರೋನ, ಪೂಜಾ ವೈದ್ಯ, ರುಕ್ಮಿಣಿ ಪಾಂಡುರಂಗ, ಶ್ವೇತನಾಯ್ಕ, ಗೌತಮಿ ಕೆರೆಮನೆ ಮುಂತಾದವರು ಹಾಜರಿದ್ದರು.ಕುಮಾರಿ ಅನ್ವಿತಾ ಪ್ರಾರ್ಥನೆ, ಪವಿತ್ರಾ ಹೊಸೂರು ನಿರೂಪಣೆ ಹಾಗೂ ಶ್ವೇತಾನಾಯ್ಕ ವಂದನಾರ್ಪಣೆ ನೆರವೇರಿಸಿದರು.