ತುಮಕೂರು/ಗುಬ್ಬಿ : ಅಪಘಾತವೊಂದರಲ್ಲಿ ಕಾರು ಹೊತ್ತಿ ಉರಿದು ಒರ್ವ ಸಜೀವವಾಗಿ ದಹನಗೊಂಡ ದಾರುಣ ಘಟನೆ ತುಮಕೂರು ಜಿಲ್ಲೆಯ ಗುಬ್ಬಿ ತಾಲ್ಲೂಕಿನ ಚೇಳೂರು ನಂದಿಹಳ್ಳಿ ಬಳಿ ಮಂಗಳವಾರ ಬೆಳಗಿನ ಝಾವ ನಡೆದಿದೆ.
ಘಟನೆಯಲ್ಲಿ ಸಜೀವವಾಗಿ ದಹನಗೊಂಡ ವ್ಯಕ್ತಿಯನ್ನು ಹೊಸಕೆರೆ ರಂಗಯ್ಯ ಎಂದು ಗುರುತಿಸಲಾಗಿದೆ. ತುಮಕೂರಿಗೆ ಪ್ರಯಾಣಿಸುತ್ತಿದ್ದ ವೇಳೆ ಈ ಘಟನೆ ನಡೆದಿದ್ದು, ಕಾರಿನಲ್ಲಿದ್ದ ಇನ್ನು ನಾಲ್ವರ ಸ್ಥಿತಿ ಗಂಭೀರವಾಗಿದ್ದು, ಗಾಯಾಳುಗಳನ್ನು ಆಸ್ಪತ್ರೆಗೆ ರವಾನಿಸಲಾಗಿದೆ. ಘಟನಾ ಸ್ಥಳಕ್ಕೆ ಸ್ಥಳೀಯ ಪೋಲಿಸರು ಬೇಟಿ ಪರಿಶೀಲನೆ ನಡೆಸುತ್ತಿದ್ದಾರೆ.